ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ–ವಿಜಿಲ್; 16,067 ದೂರು

ಸಿ ವಿಜಿಲ್: 15,102 ಪ್ರಕರಣ ಇತ್ಯರ್ಥಗೊಳಿಸಿದ ಚುನಾವಣಾ ಆಯೋಗ
ಹರಿಶಂಕರ್‌ ಆರ್‌.
Published 7 ಏಪ್ರಿಲ್ 2024, 6:19 IST
Last Updated 7 ಏಪ್ರಿಲ್ 2024, 6:19 IST
ಅಕ್ಷರ ಗಾತ್ರ

ಬಳ್ಳಾರಿ: ಚುನಾವಣಾ ಅಕ್ರಮಗಳ ಬಗ್ಗೆ ಸಾರ್ವಜನಿಕರೇ ದೂರು ದಾಖಲಿಸಲು ಚುನಾವಣಾ ಆಯೋಗ ಸಿದ್ಧಪಡಿಸಿರುವ ಸಿ-ವಿಜಿಲ್ ಮೊಬೈಲ್ ಅಪ್ಲಿಕೇಶನ್ ಬಳಸಿ ರಾಜ್ಯದಲ್ಲಿ ಈವರೆಗೆ 16,067 ದೂರುಗಳು ದಾಖಲಾಗಿವೆ. ಅವುಗಳ ಪೈಕಿ 15,102 ಪ್ರಕರಣ ಇತ್ಯರ್ಥಗೊಂಡಿದೆ.

‘ಸಿ ವಿಜಿಲ್‌’ ಆ್ಯಪ್‌ನಲ್ಲಿ ಚುನಾವಣಾ ಆಕ್ರಮ, ಮಾದರಿ ನೀತಿ ಸಂಹಿತೆ ಉಲ್ಲಂಘನೆಗಳ ಬಗ್ಗೆ ಚಿತ್ರ, ದೃಶ್ಯ ಸಮೇತ ದೂರನ್ನು ಅಪ್ಲೋಡ್‌ ಮಾಡಿದಲ್ಲಿ, ಎಲ್ಲವನ್ನೂ ಪರಿಶೀಲಿಸಿ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುತ್ತದೆ. ತಪ್ಪಿತಸ್ಥ ಸ್ಪರ್ಧಿಗಳನ್ನು ಅನರ್ಹಗೊಳಿಸಲು ಚುನಾವಣಾ ಆಯೋಗಕ್ಕೆ ಇಲ್ಲಿ ನಿರ್ಣಾಯಕ ಸಾಕ್ಷ್ಯ ಲಭಿಸುತ್ತದೆ.

ಸಾರ್ವಜನಿಕರ ದೂರುಗಳಿಗೆ ಅಧಿಕಾರಿಗಳು 100 ನಿಮಿಷಗಳ ಒಳಗೆ ಕಾರ್ಯಪ್ರವೃತ್ತರಾಗಬೇಕು. ದಾಖಲಾದ ಒಟ್ಟು ಪ್ರಕರಣಗಳ ಪೈಕಿ 887 ಪ್ರಕರಣಗಳನ್ನು ಬೇರೆ ಬೇರೆ ಕಾರಣಗಳಿಗೆ ಚುನಾವಣಾ ಆಯೋಗ ಕೈಬಿಟ್ಟಿದೆ. 78 ಪ್ರಕರಣ ಇತ್ಯರ್ಥವಾಗಲು ಬಾಕಿ ಇವೆ. 

ಯಾವ ಜಿಲ್ಲೆಯಲ್ಲಿ ಎಷ್ಟು ದೂರು?

‘ಸಿ ವಿಜಿಲ್‌‘ ಬಳಸಿ ದೂರು ನೀಡುವುದರಲ್ಲಿ ವಿಜಯಪುರ ಜಿಲ್ಲೆ ಮುಂದಿದ್ದು ಅತಿ ಹೆಚ್ಚು 3,295 ಪ್ರಕರಣ ಮತ್ತು ಅತಿ ಕಡಿಮೆ 12 ಪ್ರಕರಣ ವಿಜಯನಗರ ಜಿಲ್ಲೆಯಲ್ಲಿ ದಾಖಲಾಗಿವೆ.

‘ಈವರೆಗೆ ದಾಖಲಾಗಿರುವ ಪ್ರಕರಣಗಳಲ್ಲಿ ಹೆಚ್ಚಿನವು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದ ಬ್ಯಾನರ್‌, ಬಾವುಟ, ಜನಪ್ರತಿನಿಧಿಗಳ ಹೆಸರುಗಳುಳ್ಳ ಫಲಕ ತೆರವು ಮಾಡಲು ಕೋರಿದ ದೂರುಗಳಾಗಿವೆ. ಚುನಾವಣಾ ಭರಾಟೆ ಜೋರಾದ ಬಳಿಕ ಗಂಭೀರ ಸ್ವರೂಪದ ದೂರುಗಳು ದಾಖಲಾಗಬಹುದು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣಾ ಆಕ್ರಮಗಳ ಬಗ್ಗೆ ಜನ ಜಾಗೃತರಾಗಬೇಕು. ಅಕ್ರಮ ಕಂಡ ಕೂಡಲೇ ನಿರ್ಲಕ್ಷಿಸದೇ ದೂರುಗಳನ್ನು ದಾಖಲಿಸಬೇಕು. ಈ ಮೂಲಕ ಅಕ್ರಮ ರಹಿತ ಚುನಾವಣೆಗೆ ನೆರವಾಗಬೇಕು  –
ಸಕೀನಾ ಅಹ್ಮದ್‌ ‘ಸಿ ವಿಜಿಲ್‌‘ ನೋಡಲ್‌ ಅಧಿಕಾರಿ ಬಳ್ಳಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT