ಶನಿವಾರ, 13 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ | ಮತದಾನಕ್ಕೆ ಮನಸ್ಸು ಮಾಡದ ಮಹಿಳೆಯರು

ಪುರುಷರಿಗೆ ಹೋಲಿಸಿದರೆ ಮಹಿಳೆಯರ ಮತದಾನ ಪ್ರಮಾಣ ಕಡಿಮೆ
Published 1 ಏಪ್ರಿಲ್ 2024, 4:23 IST
Last Updated 1 ಏಪ್ರಿಲ್ 2024, 4:23 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಲೋಕಸಭಾ ಚುನಾವಣೆಯ ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಈ ಹಿಂದಿನ ಚುನಾವಣೆಗಳಲ್ಲಿಯೂ ಪುರುಷರು ಮತ್ತು ಮಹಿಳಾ ಮತದಾರರು ಸಮಪ್ರಮಾಣದಲ್ಲಿ ಇದ್ದಾರೆ. 

ಹೀಗೆ ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಮತದಾರರು ಇದ್ದರೂ ಮತದಾನಕ್ಕೆ ಮಾತ್ರ ಪೂರ್ಣ ಪ್ರಮಾಣದಲ್ಲಿ ಮನಸ್ಸು ಮಾಡುತ್ತಿಲ್ಲ. 1980ರ ಲೋಕಸಭಾ ಚುನಾವಣೆಯಿಂದ ಹಿಡಿದು 2019ರ ಲೋಕಸಭಾ ಚುನಾವಣೆಯವರೆಗಿನ ಹಿನ್ನೋಟವನ್ನು ನೋಡಿದರೆ ಈ ಕ್ಷೇತ್ರದಲ್ಲಿ ಮಹಿಳೆಯರ ಮತದಾನವು ಪುರುಷರಿಗಿಂತ ಕಡಿಮೆ ಇದೆ. 

ಇಲ್ಲಿಯವರೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಬ್ಬ ಮಹಿಳೆಯರೂ ಸಂಸದರಾಗಿ ಆಯ್ಕೆ ಆಗಿಲ್ಲ. ಅಲ್ಲದೆ ಪ್ರಮುಖ ಪಕ್ಷಗಳು ಸಹ ಮಹಿಳಾ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿಲ್ಲ. 

1980ರ ಲೋಕಸಭಾ ಚುನಾವಣೆಯಲ್ಲಿ 4,08,214 ( ಶೇ 57.1) ಮತದಾರರು ಮತದಾನ ಮಾಡಿದ್ದರು. ಇವರಲ್ಲಿ ಪುರುಷರು 2,39,535, ಮಹಿಳೆಯರು1,68,679 ಮತದಾನ ಮಾಡಿದ್ದಾರೆ. 

1984ರ ಚುನಾವಣೆಯಲ್ಲಿ ಒಟ್ಟು ಮತದಾರರು 7,50,841 ಮತದಾರರು ಇದ್ದಾರೆ. ಈ ಪೈಕಿ 5,57,461 ಮತದಾನವಾಗಿದೆ. 3,03,907 ಪುರುಷರು, 2,53,554 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. 

1989ರ ಲೋಕಸಭಾ ಚುನಾವಣೆಯಲ್ಲಿ ಒಟ್ಟು 9,79,204  ಮತದಾರರು ಇದ್ದಾರೆ. ಇವರಲ್ಲಿ5,01,799  ಪುರುಷರು ಮತ್ತು 4,77,405 ಮಹಿಳಾ ಮತದಾರರು ಇದ್ದರು. ಈ ಪೈಕಿ 
ಪುರುಷ 3,91,434 ಮತ್ತು ಮಹಿಳಾ ಮತದಾರರು 3,36,010 ಮತದಾನ ಮಾಡಿದ್ದರು. ಈ ಚುನಾವಣೆಯಲ್ಲಿ ಪುರುಷರು ಮತ್ತು ಮಹಿಳೆಯರ ಮತದಾನದ ನಡುವಿನ ಅಂತರ ಶೇ 18.8ರಷ್ಟು ಇದೆ.

1991ರ ಲೋಕಸಭಾ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ 6,67,734 ಮತದಾರರು ಮತದಾನ ಮಾಡಿದ್ದಾರೆ. ಇವರಲ್ಲಿ 3,69,140 ಪುರುಷರು ಮತ್ತು 2,98,594 ಮಹಿಳೆಯರು ಹಕ್ಕು ಚಲಾಯಿಸಿದ್ದಾರೆ. ಈ ಚುನಾವಣೆಯಲ್ಲಿಯೂ ಸಹ ಪುರುಷರು ಮತ್ತು ಮಹಿಳಾ ಮತದಾರರ ನಡುವಿನ ಅಂತರ ಶೇ 15.5ರಷ್ಟು ಇತ್ತು. ಹೀಗೆ 1989 ಮತ್ತು 1991ರ ಚುನಾವಣೆಯಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಬಂದಿಲ್ಲ ಎನ್ನುವುದನ್ನು ಕಾಣಬಹುದು.

1996ರ ಲೋಕಸಭಾ ಚುನಾವಣೆಯಲ್ಲಿ 7,81,056 ಮಂದಿ ಮತಚಲಾಯಿಸಿದ್ದರು. ಈ ಪೈಕಿ 4,21,315 ಮಂದಿ ಪುರುಷ ಹಾಗೂ 3,59,741 ಮಹಿಳೆಯರು ಮತದಾನ ಮಾಡಿದ್ದರು.

 1998ರ ಲೋಕಸಭಾ ಚುನಾವಣೆಯಲ್ಲಿ 8,25,229 ಮತದಾರರು ಹಕ್ಕು ಚಲಾಯಿಸಿದ್ದರು. ಪುರುಷರು 4,44,125 ಮತ್ತು ಮಹಿಳೆಯರು 3,81,104 ಮತದಾನ ಮಾಡಿದ್ದರು. 1999ರ ಲೋಕಸಭಾ ಚುನಾವಣೆಯಲ್ಲಿ 8,50,230 ಮತದಾರರು ಹಕ್ಕು ಚಲಾಯಿಸಿದ್ದು ಈ ಪೈಕಿ 4,55,927 ಪುರುಷರು ಮತ್ತು 3,94,303 ಮಹಿಳೆಯರು ಮತದಾನ ಮಾಡಿದ್ದಾರೆ.

2004ರ ಲೋಕಸಭಾ ಚುನಾವಣೆಯಲ್ಲಿ 9,29,379 ಮತದಾರರು ಮತದಾನ ಮಾಡಿದ್ದಾರೆ. ಇವರಲ್ಲಿ 4,85,593 ಪುರುಷರು ಮತ್ತು 4,43,786 ಮಹಿಳಾ ಮತದಾರರು ಮತಮುದ್ರೆ ಒತ್ತಿದ್ದರು. 2009ರ ಲೋಕಸಭಾ ಚುನಾವಣೆಯಲ್ಲಿಯೂ 9,29,379 (ಶೇ 70.7) ಮತದಾರರು ಮತದಾನ ಮಾಡಿದ್ದರು. ಇವರಲ್ಲಿ ಪುರುಷರು 4,85,593 ಮತ್ತು ಮಹಿಳೆಯರು 4,43,786 ಮತದಾನ ಮಾಡಿದ್ದರು.

ಹೀಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಮಹಿಳಾ ಮತದಾರರು ಮತಮುದ್ರೆ ಒತ್ತುವುದರಲ್ಲಿ ಹಿಂದಿದ್ದಾರೆ.

9.89 ಲಕ್ಷ ಮಹಿಳಾ ಮತದಾರರು

2024ರ ಮಾ.16ರವರೆಗಿನ ಮತದಾರರ ವಿವರದ ಪ್ರಕಾರ ಮಹಿಳಾ ಮತದಾರರು ಕ್ಷೇತ್ರ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. 989369 ಮಂದಿ ಮಹಿಳಾ ಮತದಾರರು ಮತ್ತು 976436 ಪುರುಷ ಮತದಾರರು ಈ ಬಾರಿ ಹಕ್ಕು ಚಲಾಯಿಸುವ ಪಟ್ಟಿಯಲ್ಲಿ ಇದ್ದಾರೆ. ಈ ಬಾರಿಯಾದರೂ ಮಹಿಳೆಯರು ಪುರುಷರಿಗಿಂತ ಮತದಾನದಲ್ಲಿ ಮುನ್ನುಗ್ಗುವರೇ ಎನ್ನುವ ಕುತೂಹಲವಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT