ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ದೇಶಕ್ಕೆ ಹಿಡಿದ ಶನಿ: ರಮೇಶ್‌ ಕುಮಾರ್‌

Published 21 ಏಪ್ರಿಲ್ 2024, 21:46 IST
Last Updated 21 ಏಪ್ರಿಲ್ 2024, 21:46 IST
ಅಕ್ಷರ ಗಾತ್ರ

ಶ್ರೀನಿವಾಸಪುರ (ಕೋಲಾರ): ‘ಮೋದಿ ಈ ದೇಶಕ್ಕೆ ಹಿಡಿದಿರುವ ಶನಿ. ಜೂನ್ 4ಕ್ಕೆ ಶನಿ ಬಿಡಲಿದೆ’ ಎಂದು ವಿಧಾನಸಭೆ ಮಾಜಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಕೆ.ಆರ್.ರಮೇಶ್ ಕುಮಾರ್‌ ಹೇಳಿದ್ದಾರೆ. 

‘ದೇವರಲ್ಲಿ ನಂಬಿಕೆ ಇಟ್ಟುಕೊಂಡು ಜೂನ್‌ 4 ತಾರೀಖು ಕಾಯುತ್ತಿದ್ದೇವೆ. ಈ ದೇಶಕ್ಕೆ ಹಿಡಿದ ಶನಿ ಬಿಡುಗಡೆಯಾಗಲಿ ನಮ್ಮಪ್ಪ ಎಂದು ಕಾಯುತ್ತಿದ್ದೇವೆ’ ಎಂದು ತಾಲ್ಲೂಕಿನ ರೋಜರ್‌ನಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ಕಾಂಗ್ರೆಸ್‌ ಪಕ್ಷದಿಂದ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಹೇಳಿದರು.

‘ಒಳ್ಳೆಯವರಿಗೆ ಒಳ್ಳೆಯದು ಮಾಡುವ ಮತ್ತು ಕೆಟ್ಟವರನ್ನು ಶಿಕ್ಷಿಸುವವನೇ ಶನಿ ದೇವ. ಮೋದಿಯವರು ಕಾಂಗ್ರೆಸ್‌ಗೆ ಶನಿಯಾಗಿ ಕಾಡಲಿದ್ದಾರೆ. ರಮೇಶ್‌ಕುಮಾರ್ ಎಷ್ಟು ಸತ್ಯವಂತರು ಎನ್ನುವುದು ಎಲ್ಲರಿಗೂ ಗೊತ್ತಿದೆ. ಮೋದಿಯವರು ರಮೇಶ್‌ ಕುಮಾರ್‌ ಮತ್ತು ಕಾಂಗ್ರೆಸ್‌ಗೆ ಶನಿಯಾಗಿದ್ದಾರೆ’ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

‘ಇಂದಿರಾ ಗಾಂಧಿ ಕುಳಿತಿದ್ದ ಸೀಟಲ್ಲಿ ಬಂದು ಕೂತುಬಿಟ್ಟ. ಎಲ್ಲಾ ಜಾತಿ ಜನಾಂಗದವರಿಗೆ, ಬಡವರಿಗೆ, ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿದವರು ಇಂದಿರಾ ಗಾಂಧಿ. ಎಂಥವರ ಜಾಗಕ್ಕೆ ಎಂಥವನು ಬಂದು ಕೂತು ಬಿಟ್ಟೆಯಪ್ಪಾ’ ಎಂದು ರಮೇಶ್‌ ಕುಮಾರ್‌ ಟೀಕಿಸಿದರು.

‘ಸಣ್ಣಪುಟ್ಟವರು ಸುಳ್ಳು ಹೇಳುವುದನ್ನು ನೋಡಿದ್ದೇವೆ. ಸಂತೆಯಲ್ಲಿ ಹಾವಾಡಿಗರು ಏನೋ ಒಂದು ಸುಳ್ಳು ಹೇಳುವುದನ್ನು ಕೇಳಿದ್ದೇವೆ. ಆದರೆ, ದೇಶದ ಪ್ರಧಾನಮಂತ್ರಿಯಾದವರು ಈ ಪಾಟಿ ಸುಳ್ಳು ಹೇಳುವುದನ್ನು ಈ ಪ್ರಪಂಚದ ಇತಿಹಾಸದಲ್ಲಿ ಎಲ್ಲೂ ಕೇಳಿರಲಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT