ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಪ್ಪಳ: ಜಿಲ್ಲೆಯ ಹಲವು ಕಡೆ ಹನುಮಾನ್‌ ಚಾಲೀಸ್‌ ಪಠಣ

Published 4 ಮೇ 2023, 16:20 IST
Last Updated 4 ಮೇ 2023, 16:20 IST
ಅಕ್ಷರ ಗಾತ್ರ

ಗಂಗಾವತಿ/ಕೊಪ್ಪಳ: ಕಾಂಗ್ರೆಸ್‌ ಬಜರಂಗದಳ ನಿಷೇಧ ಬಗ್ಗೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿರುವುದನ್ನು ಖಂಡಿಸಿ ಗುರುವಾರ ಗಂಗಾವತಿಯ ಕೃಷ್ಣದೇವರಾಯ ವೃತ್ತದಲ್ಲಿ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ಮಾಡಿದರು.

ಸಂಘಟನೆ ಪ್ರಾಂತ ಪ್ರಮುಖ ಶ್ರೀಕಾಂತ ಹೊಸಕೇರಿ ಮಾತನಾಡಿ ‘ದೇಶ, ಧರ್ಮದ ರಕ್ಷಣೆಗಾಗಿ ಸದಾ ಸಮಾಜವನ್ನು ಜಾಗೃತಗೊಳಿಸುತ್ತಿರುವ ಸಂಘಟನೆಗಳಲ್ಲಿ ಬಜರಂಗದಳವೂ ಒಂದು. ಕಾಂಗ್ರೆಸ್‌ ತನ್ನ ಭರವಸೆ ವಾಪಸ್‌ ಪಡೆಯಬೇಕು. ಮತದಾರರು ಆ ಪಕ್ಷವನ್ನು ತಿರಸ್ಕಾರ ಮಾಡಬೇಕು’ ಎಂದು ಆಗ್ರಹಿಸಿದರು.

‘ದೇಶ ವಿರೋಧಿ ಜಿಹಾದಿ ಮನಸ್ಥಿತಿಯ ಪಿಎಫ್‌ಐ ಸಂಘಟನೆಯೊಂದಿಗೆ ದೇಶಭಕ್ತ ಬಜರಂಗದಳ ಜೋಡಿಸಿರುವ ಕಾಂಗ್ರೆಸ್‌ ಹಿಂದೂ ವಿರೋಧಿಯಾಗಿದೆ. ರಾಜ್ಯದಲ್ಲಿ ಈ ಹಿಂದೆ ಅಧಿಕಾರದಲ್ಲಿ ಕಾಂಗ್ರೆಸ್ ಹಿಂದೂ ವಿರೋಧಿ ನೀತಿ ಅನುಸರಿಸಿ ಅಧಿಕಾರ ಕಳೆದುಕೊಂಡಿದೆ’ ಎಂದರು.

ಜಾಗರಣ ವೇದಿಕೆ ಪ್ರಾಂತ ಕಾರ್ಯದರ್ಶಿ ಅಯ್ಯನಗೌಡ ಹೇರೂರು, ಮುಖಂಡ ನೀಲಕಂಠ ಕಟ್ಟಿಮನಿ, ವಿರೇಶ, ಪ್ರಶಾಂತ ಚಿತ್ರಗಾರ, ವಿನಯ ಗಾಳಿ, ಸಿದ್ಧು ಗೌಳಿ, ಕುಮಾರ ಹೂಗಾರ, ಕಿಟ್ಟಿ ನಾಯಕ, ನಾಗರಾಜ, ಕೃಷ್ಣ ಅಗಲೂರ, ಗಾದೆಪ್ಪ, ಮಂಜು ಗಾಂಧಿನಗರ ಪಾಲ್ಗೊಂಡಿದ್ದರು. ಕೊಪ್ಪಳದ ಭಾಗ್ಯನಗರದಲ್ಲಿ ಆಂಜನೇಯನ ಭಕ್ತರು ಹನುಮಾನ್‌ ಚಾಲೀಸ್‌ ಪಠಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT