ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls | ಜಿ.ಎಂ.ಸಿದ್ದೇಶ್ವರ–ಶಾಮನೂರು ಶಿವಶಂಕರಪ್ಪ ಜಟಾಪಟಿ

Published 7 ಮೇ 2024, 22:44 IST
Last Updated 7 ಮೇ 2024, 22:44 IST
ಅಕ್ಷರ ಗಾತ್ರ

ದಾವಣಗೆರೆ: ‘ಚುನಾವಣೆಯಲ್ಲಿ ಗೆಲುವು ಸಾಧಿಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನವರು ಹಣದ ಹೊಳೆ ಹರಿಸಿದ್ದಾರೆ’ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಅವರು ಆರೋಪಿಸಿದರು.

ನಗರದಲ್ಲಿ ತಮ್ಮ ಕುಟುಂಬ ಸದಸ್ಯರೊಂದಿಗೆ ಮತ ಚಲಾಯಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಸಾಕಷ್ಟು ಹಣ ಹಂಚಿದ್ದಾರೆ. ಆದರೂ, ಗಾಯತ್ರಿ ಸಿದ್ದೇಶ್ವರ ಅವರು ಗೆಲುವು ಸಾಧಿಸಲಿದ್ದಾರೆ. ಪ್ರಧಾನಿ ಮೋದಿ ಸತತ 3ನೇ ಬಾರಿ ಪ್ರಧಾನಿಯಾಗಲಿದ್ದಾರೆ’ ಎಂದು ಹೇಳಿದರು.

ಕತ್ತೆ ಕಾಯುತ್ತಿದ್ದರಾ?:

‘ಕಾಂಗ್ರೆಸ್‌ನವರು ಹಣದ ಹೊಳೆ ಹರಿಸಿದ್ದಾರೆ’ ಎಂಬ ಜಿ.ಎಂ.ಸಿದ್ದೇಶ್ವರ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ಅಭ್ಯರ್ಥಿ ಪ್ರಭಾ ಮಲ್ಲಿಕಾರ್ಜುನ್‌ ಅವರ ಮಾವ, ಶಾಸಕ ಶಾಮನೂರು ಶಿವಶಂಕರಪ್ಪ ಅವರು, ‘ಕಾಂಗ್ರೆಸ್‌ನವರು ಹಣ ಹಂಚುವಾಗ ಬಿಜೆಪಿಯವರೇನು ಮಾಡುತ್ತಿದ್ದರು? ಅವರೇನು ಕತ್ತೆ ಕಾಯುತ್ತಿದ್ದರಾ’ ಎಂದು ಪ್ರಶ್ನಿಸಿದರು.

‘ನಿಮ್ಮ ಅಳಿಯ ಅಲ್ವಾ ಸರ್’ ಎಂಬ ಮಾಧ್ಯಮದವರ ಮಾತಿಗೆ ‘ಹೌದು, ನಮ್ಮ ಅಳಿಯನೇ.. ಕತ್ತೆ ಕಾಯುತ್ತಿದ್ದರಾ’ ಎಂದು ಪ್ರಶ್ನಿಸಿ ನಕ್ಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT