ಕುಷ್ಟಗಿ (ಕೊಪ್ಪಳ ಜಿಲ್ಲೆ): ಜಿಲ್ಲೆಯ ಕುಷ್ಟಗಿ ಪಟ್ಟಣದ ಸಿಂಧನೂರು ರಸ್ತೆಯ ಪಕ್ಕದಲ್ಲಿರುವ ಮೈದಾನದಲ್ಲಿ ಶುಕ್ರವಾರ ನಿಗದಿಯಾಗಿದ್ದ ಕಾಂಗ್ರೆಸ್ ಪ್ರಚಾರ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳಲಿಲ್ಲ.
ಹವಾಮಾನ ವೈಪರೀತ್ಯದ ಕಾರಣ ರಾಹುಲ್ ಗಾಂಧಿ ಅವರಿಗೆ ಕಲಬುರಗಿಯಿಂದ ಕುಷ್ಟಗಿಗೆ ಪ್ರಯಾಣಿಸಲು ಸಾಧ್ಯವಾಗಲಿಲ್ಲ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ.
ಈ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ ಮಹಿಳಾ ಮತದಾರರ ಜೊತೆ ಸಂವಾದ ನಡೆಸುವರು. ಇದಕ್ಕಾಗಿ ಸಾವಿರಾರು ಮಹಿಳೆಯರು ಪಾಲ್ಗೊಂಡಿದ್ದರು. ಅವರು ನಿರಾಸೆಯಿಂದಲೇ ವಾಪಸ್ ಹೋದರು.