ಇಂದು ದಕ್ಷಿಣದ ಖ್ಯಾತ ನಟಿ ತಮನ್ನಾ ಭಾಟಿಯಾ ಅವರ ಹುಟ್ಟುಹಬ್ಬ. ಆ ಕಾರಣಕ್ಕೆ ಅವರ ಮುಂದಿನ ತೆಲುಗು ವೆಬ್ಸರಣಿ ‘11th ಹವರ್’ನ ಫಸ್ಟ್ಲುಕ್ ಬಿಡುಗಡೆ ಮಾಡಿದ ತಂಡ.

ಈ ವೆಬ್ಸರಣಿಯ ಪೋಸ್ಟರ್ ಅನ್ನು ಟ್ವೀಟರ್ನಲ್ಲಿ ಹಂಚಿಕೊಂಡಿರುವ ನಿರ್ದೇಶನ ಪ್ರವೀಣ್ ಸತ್ರು ‘ಇದು ಹುಟ್ಟುಹಬ್ಬದ ಹುಡುಗಿಯ ಫಸ್ಟ್ಲುಕ್. 11th ಹವರ್ನ ಆಶಿಕಾ ರೆಡ್ಡಿಯನ್ನು ಇಲ್ಲಿ ಪರಿಚಯಿಸುತ್ತಿದ್ದೇವೆ. ಇದು ತಮನ್ನಾ ಅವರ ಮೊದಲ ತೆಲುಗು ವೆಬ್ಸರಣಿ’ ಎಂದು ಬರೆದುಕೊಂಡಿದ್ದಾರೆ.

ಈ ಫೋಸ್ಟರ್ನಲ್ಲಿ ತಮನ್ನಾ ಲೇಡಿ ಬಾಸ್ ಆಗಿ ಕಾಣಿಸಿಕೊಂಡಿದ್ದಾರೆ. ಈ ಹಿಂದೆ ಈ ವೆಬ್ಸರಣಿಯ ಬಗ್ಗೆ ‘ನನ್ನ ಮೊದಲ ತೆಲುಗು ವೆಬ್ಷೋ 11th ಹವರ್ ಘೋಷಣೆಗೆ ನನಗೆ ಖುಷಿ ಎನ್ನಿಸುತ್ತಿದೆ’ ಎಂದು ಬರೆದುಕೊಂಡಿದ್ದರು.

ಇಂದು 31ನೇ ವರ್ಷಕ್ಕೆ ಕಾಲಿರಿಸುತ್ತಿರುವ ತಮನ್ನಾಗೆ ಸ್ನೇಹಿತರು ಹಾಗೂ ಆತ್ಮೀಯರು ಶುಭ ಹಾರೈಸಿದ್ದಾರೆ.

‘ನನ್ನ ಪ್ರೀತಿಯ ಗೆಳತಿ ನಿನ್ನ ಭವಿಷ್ಯ ಉಜ್ವಲವಾಗಿರಲಿ, ಮುಂದಿನ ವರ್ಷಗಳಲ್ಲಿ ನಮಗೆ ನೀನು ನೀಡುವ ಸರ್ಪ್ರೈಜ್ಗಳನ್ನು ಎದುರು ನೋಡಲು ಕಾತರಳಾಗಿದ್ದೇನೆ’ ಎಂದು ನಟಿ ಸಮಂತಾ ತಮ್ಮ ಟ್ವಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಕಾಜಲ್ ಅಗರ್ವಾಲ್, ಆರ್ಜಿ ಚೈತು, ಇನಾ ಶಾ, ಗೋಫು ಮೋಹನ್ ಸೇರಿದಂತೆ ಹಲವರು ತಮನ್ನಾಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.