ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ, ತೆಲುಗುನಲ್ಲಿ ಬರಲಿದೆ ‘18ರಿಂದ 25’

Last Updated 23 ಡಿಸೆಂಬರ್ 2018, 19:51 IST
ಅಕ್ಷರ ಗಾತ್ರ

ಸ್ಮೈಲ್ ಜೋಹರ್ ಟಾಕೀಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ‘18 ರಿಂದ 25’ ಚಿತ್ರವನ್ನು ಈ ಹಿಂದೆ ತೂಫಾನ್ ಹಾಗೂ ಬಳ್ಳಾರಿ ದರ್ಬಾರ್ ಚಿತ್ರಗಳನ್ನು ನಿರ್ದೇಶಿಸಿದ್ದ ಸ್ಮೈಲ್ ಶ್ರೀನು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

‘18 ರಿಂದ 25’ ಚಿತ್ರದ ಪ್ರಥಮ ಪ್ರತಿ ಇದೀಗ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಸಿದ್ದವಾಗಿದೆ. ಜನವರಿಯಲ್ಲಿ ಹಾಡುಗಳು ಬಿಡುಗಡೆಯಾಗಲಿದ್ದು, ಫೆಬ್ರುವರಿಯಲ್ಲಿ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ಹೇಳಿದ್ದಾರೆ.

ಹದಿನೆಂಟರಿಂದ ಇಪ್ಪತ್ತೈದರ ಹರೆಯದ ಹೃದಯಗಳ ಮಿಡಿತವನ್ನು ಈ ಚಿತ್ರದ ಮೂಲಕ ಹೇಳುವ ಪ್ರಯತ್ನ ಮಾಡಲಾಗಿದೆ. ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ, ಶಿವ ಕೆ.ನಾಯ್ಡು ಛಾಯಾಗ್ರಹಣ, ಬಿ.ಮಲ್ಲಿ ಸಂಕಲನ, ವಿ.ನಾಗೇಂದ್ರ ಪ್ರಸಾದ್, ಸ್ಮೈಲ್‍ಶ್ರೀನು ಸಾಹಿತ್ಯ, ವಯಲೆನ್ಸ್ ವೇಲು ಸಾಹಸ, ಚಿರಂಜೀವಿ ನೃತ್ಯ ನಿರ್ದೇಶನವಿದೆ.

ಅಭಿರಾಮ್, ಋಷಿತೇಜ, ಅಖಿಲಾ, ವಿದ್ಯಾಶ್ರೀ, ರಾಕ್ ಲೈನ್ ಸುಧಾಕರ್, ಫಾರೂಕ್‍ಖಾನ್, ನಾಗೇಶ್ವರರಾವ್, ಉದಯ ಭಾಸ್ಕರ್, ರವಿರಾಮ್, ಪೋಲಾ ಶ್ರೀನಿವಾಸ್‍ ಬಾಬು, ಭಾಗ್ಯಶ್ರೀ ಮುಖ್ಯ ತಾರಾಬಳಗದಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT