ಶ್ರೀಕೃಷ್ಣ ಎಂದರೆ ಥಟ್ಟನೇ ನೆನಪಿಗೆ ಬರುವುದು ಬೆಂಗಳೂರಿನ ಇಸ್ಕಾನ್ ದೇವಾಲಯ. ಜನ್ಮಾಷ್ಟಮಿಗೂ ಎರಡು ದಿನ ಮೊದಲೇ ಇಸ್ಕಾನ್‌ನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಆರಂಭವಾಗಿದ್ದು, ಹೂವು ಮತ್ತು ವಿದ್ಯುತ್ ದೀಪಗಳ ಅಲಂಕಾರದಿಂದ ಕಂಗೊಳಿಸುತ್ತಿದೆ.
ಭಕ್ತರಿಗಾಗಿ ಒಂದು ಲಕ್ಷ ಲಡ್ಡು, ಸಿಹಿ, ತಿಂಡಿ ತಿನಿಸು ಸಿದ್ಧವಾಗಿವೆ. ಪ್ರಸಾದಕ್ಕಾಗಿ200 ಕ್ವಿಂಟಲ್ ಸಕ್ಕರೆ ಪೊಂಗಲ್ ತಯಾರಾಗಲಿದೆ. ಪ್ರತಿ ದಿನ 25 ಸಾವಿರ ಜನರಿಗೆ ಪ್ರಸಾದ ವಿತರಣೆ ಇರುತ್ತದೆ ಎಂದು ಇಸ್ಕಾನ್ ಸಾರ್ವಜನಿಕ ಸಂಪರ್ಕ ಮುಖ್ಯಸ್ಥ ಕುಲಶೇಖರ ಚೈತನ್ಯ ದಾಸ ಅವರು ‘ಮೆಟ್ರೊ’ಗೆ ತಿಳಿಸಿದರು.
ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ ನಾಲ್ಕರಿಂದ ರಾತ್ರಿ 12 ಗಂಟೆಯವರೆಗೂ ಸಾರ್ವಜನರಿಕರಿಗೆ ಇಸ್ಕಾನ್ ಮುಕ್ತವಾಗಿರುತ್ತದೆ.ಭಕ್ತರಿಗೆ ನೆರವು ನೀಡಲು 800 ಸ್ವಯಂ ಸೇವಕರ ಪಡೆ ಸಜ್ಜಾಗಿದೆ.
ತಮಿಳುನಾಡಿನ ಕುಂಭಕೋಣಂನಿಂದ ತರಿಸಲಾದ ಅಮೆರಿಕನ್ ಡೈಮಂಡ್ ಮತ್ತು ಬೆಳ್ಳಿಯಚಿಟ್ಟೆ ವಿನ್ಯಾಸದ ಆಭರಣಗಳು ಕೃಷ್ಣನನ್ನು ಅಲಂಕರಿಸಲಿವೆ. ರಾಧಾ–ಕೃಷ್ಣರಿಗೆ ಉಯ್ಯಾಲೆ ಸೇವೆ, ಪಂಚಾಮೃತ ಸ್ನಾನ, ಪುಷ್ಪೋದಕ ಮುಂತಾದ ಧಾರ್ಮಿಕ ವಿಧಿ, ವಿಧಾನಗಳು ನಡೆಯಲಿವೆ.
ಎರಡರಿಂದ ನಾಲ್ಕು ವರ್ಷದ ಪುಟ್ಟ ಮಕ್ಕಳಿಗಾಗಿ ಬುಧವಾರ ಏರ್ಪಡಿಸಲಾಗಿದ್ದ ಕೃಷ್ಣವೇಷ ಸ್ಪರ್ಧೆ ಮತ್ತು ಬೆಣ್ಣೆ ಮೆಲ್ಲುವ ಸ್ಪರ್ಧೆಯಲ್ಲಿ 200 ಮಕ್ಕಳು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.