ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದರ್ಶನ್‌ ಕರೆಗೆ ಮೃಗಾಲಯಗಳಿಗೆ ಹರಿದುಬಂದ ₹24.75 ಲಕ್ಷ ದೇಣಿಗೆ

Last Updated 7 ಜೂನ್ 2021, 7:53 IST
ಅಕ್ಷರ ಗಾತ್ರ

ಬೆಂಗಳೂರು: ಮೃಗಾಲಯದಲ್ಲಿರುವ ಪ್ರಾಣಿ, ಪಕ್ಷಿಗಳನ್ನು ದತ್ತು ಪಡೆಯಲು ನಟ ದರ್ಶನ್‌ ಅವರು ನೀಡಿರುವ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜೂನ್‌ 5 ಮತ್ತು 6ರಂದು ಎರಡೇ ದಿನಗಳಲ್ಲಿ ರಾಜ್ಯದ 9 ಮೃಗಾಲಯಗಳಿಗೆ ₹ 24.75 ಲಕ್ಷ ದೇಣಿಗೆ ಹಾಗೂ ದತ್ತು ಹರಿದುಬಂದಿದೆ.

ಜೂನ್‌ 5ರಂದು ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿ ಸಸಿ ನೆಡುವ ಮುಖಾಂತರ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಿದ್ದ ನಟ ದರ್ಶನ್‌, ‘ಕೋವಿಡ್‌ ಮಹಾಮಾರಿಯಿಂದ ಮಾನವಕುಲಕ್ಕೆ ಎಷ್ಟು ತೊಂದರೆ ಆಗಿದೆಯೋ ಅಷ್ಟೇ ತೊಂದರೆ ಪ್ರಾಣಿಸಂಕುಲಕ್ಕೂ ಆಗಿದೆ. ಹೀಗಾಗಿ ಪ್ರಾಣಿ,ಪಕ್ಷಿಗಳನ್ನು ದತ್ತುಪಡೆದು ಪ್ರಾಣಿಸಂಕುಲ ಉಳಿಸಿ, ಮೃಗಾಲಯ ಬೆಳೆಸಿ’ ಎಂದು ಕರೆ ನೀಡಿದ್ದರು.

ಮೈಸೂರು ಮೃಗಾಲಯಕ್ಕೆ ಅತಿ ಹೆಚ್ಚು(₹13.66 ಲಕ್ಷ) ದೇಣಿಗೆಯನ್ನು ಜನರು ನೀಡಿದ್ದು, 9 ಮೃಗಾಲಯಗಳಿಗೆ ಹರಿದುಬಂದ ದೇಣಿಗೆ ಮತ್ತು ದತ್ತು ವಿವರವನ್ನು ‘Zoos Of Karnataka’ ತನ್ನ ಟ್ವಿಟರ್‌ ಖಾತೆಯಲ್ಲಿ ಬಹಿರಂಗಪಡಿಸಿದೆ. ಜೊತೆಗೆ ಈ ಕಾರ್ಯದಲ್ಲಿ ಕೈಜೋಡಿಸಿದ ನಟ ದರ್ಶನ್‌ ಹಾಗೂ ಜನರಿಗೂ ಧನ್ಯವಾದ ತಿಳಿಸಿದೆ.

ದೇಣಿಗೆ ಹಾಗೂ ದತ್ತು ವಿವರ

ಮೃಗಾಲಯ ಎರಡು ದಿನದಲ್ಲಿ ಸಂಗ್ರಹವಾದ ಮೊತ್ತ(₹ ಗಳಲ್ಲಿ)

1.ಬೆಳಗಾವಿ- 32,689

2.ಗದಗ- 38,939

3.ಕಲಬುರ್ಗಿ- 48,383

4.ದಾವಣಗೆರೆ- 62,974

5. ಹಂಪಿ- 64,089

6.ಚಿತ್ರದುರ್ಗ- 30,013

7.ಬನ್ನೇರುಘಟ್ಟ- 7,30,239

8.ಶಿವಮೊಗ್ಗ- 1,01,430

9.ಮೈಸೂರು- 13,66,312

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT