‘777 ಚಾರ್ಲಿ’ ತೆರೆಗೆ ಬರಲು ಮುಹೂರ್ತ

ಕೊನೆಗೂ ಬರುತ್ತಿದ್ದಾನೆ ‘777 ಚಾರ್ಲಿ’.
ರಕ್ಷಿತ್ ಶೆಟ್ಟಿ ನಟನೆ, ನಿರ್ಮಾಣದ ‘777 ಚಾರ್ಲಿ’ ತೆರೆಗೆ ಬರಲು ಮುಹೂರ್ತ ನಿಗದಿಯಾಗಿದೆ. ಜೂನ್ 10ರಂದು ಈ ಚಿತ್ರ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಪರಂವಃ ಸ್ಟುಡಿಯೋ ಪ್ರಕಟಣೆ ತಿಳಿಸಿದೆ.
‘777 ಚಾರ್ಲಿ’ಗೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ. ಪರಂವಃ ಸ್ಟುಡಿಯೋಸ್ ನಿರ್ಮಾಣದ ಈ ಪ್ಯಾನ್ ಇಂಡಿಯಾ ಚಿತ್ರವು ಕಳೆದ ಡಿ.31ಕ್ಕೇ ಬಿಡುಗಡೆಯಾಗಬೇಕಿತ್ತು. ಕಾರಣಾಂತರದಿಂದ ಮುಂದಕ್ಕೆ ಹೋಗಿತ್ತು.
ಚಿತ್ರದ ಕಥೆ, ನಿರ್ದೇಶನ ಕಿರಣ್ರಾಜ್ ಕೆ. ಅವರದ್ದು. ಜಿ.ಎಸ್.ಗುಪ್ತ ಹಾಗೂ ರಕ್ಷಿತ್ ಶೆಟ್ಟಿ ಚಿತ್ರದ ನಿರ್ಮಾಪಕರು. ಸಂಗೀತಾ ಶೃಂಗೇರಿ ಚಿತ್ರದ ನಾಯಕಿ. ನಟ, ನಿರ್ದೇಶಕ ರಾಜ್ ಬಿ.ಶೆಟ್ಟಿ, ಡ್ಯಾನಿಶ್ ಸೇಠ್ ತಾರಾಗಣದಲ್ಲಿದ್ದಾರೆ. ಇಲ್ಲಿ ನಾಯಿ (ಚಾರ್ಲಿ) ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದೆ. ಟೀಸರ್ನಲ್ಲಿ ಅದರ ತುಂಟಾಟ, ವರ್ತನೆ ಭಾರೀ ಮೆಚ್ಚುಗೆ ಪಡೆದಿದೆ.
ಟೀಸರ್ ವೀಕ್ಷಿಸಲು ಲಿಂಕ್:
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.