ಗುರುವಾರ , ಜುಲೈ 7, 2022
20 °C

‘83‘ ನೋಡಿ ಬಿಕ್ಕಿಬಿಕ್ಕಿ ಅಳುತ್ತಿದ್ದ ದೀಪಿಕಾಗೆ ಕಬೀರ್‌ ಖಾನ್‌ ಹೇಳಿದ್ದೇನು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಪಿಲ್‌ ದೇವ್‌ ನಾಯಕತ್ವದಲ್ಲಿ ಟೀಮ್ ಇಂಡಿಯಾ ವಿಶ್ವಕಪ್ ಗೆದ್ದ ರೋಚಕ ಕಥೆಯನ್ನು ಹೊಂದಿರುವ ಬಹುನಿರೀಕ್ಷಿತ ಚಿತ್ರ ‘83‘ ಬಿಡುಗಡೆಗೆ ಸಜ್ಜಾಗಿದೆ. 

ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ಸಿಂಗ್ ಹಾಗೂ ಕಪಿಲ್‌ ದೇವ್‌ ಅವರ ಪತ್ನಿ ರೋಮಿ ದೇವ್ ಪಾತ್ರದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಬಗ್ಗೆ ಖಾಸಗಿ ವಾಹಿನಿಗೆ ಸಂದರ್ಶನ ನೀಡಿರುವ ನಿರ್ದೇಶಕ ಕಬೀರ್ ಖಾನ್‌ ಅವರು ನಾಯಕಿ ದೀಪಿಕಾ ಪಡುಕೋಣೆ ಕುರಿತು ಕೆಲ ಭಾವುಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಚಿತ್ರವನ್ನು ವೀಕ್ಷಿಸಿದ ನಂತರ ಕಬೀರ್‌ ಖಾನ್‌ಗೆ ಫೋನ್‌ ಕರೆ ಮಾಡಿರುವ ದೀಪಿಕಾ ಏನನ್ನೂ ಮಾತನಾಡದೇ ಬಿಕ್ಕಿಬಿಕ್ಕಿ ಅಳುತ್ತಿದ್ದರೆಂದು ‘83‘ ನಿರ್ದೇಶಕರು ಬಹಿರಂಗಪಡಿಸಿದ್ದಾರೆ.

‘ನನ್ನನ್ನು ಕ್ಷಮಿಸಿ ಕಬೀರ್‌... ನನ್ನಿಂದ ಏನನ್ನೂ ಮಾತನಾಡಲು ಆಗುತ್ತಿಲ್ಲ‘ ಎಂದು ಹೇಳಿ ದೀಪಿಕಾ ಅಳುತ್ತಿದ್ದರು ಎಂದು ಕಬೀರ್‌ ತಿಳಿಸಿದ್ದಾರೆ.

ದೀಪಿಕಾಗೆ ಪ್ರತಿಕ್ರಿಯಿಸಿರುವ ಕಬೀರ್‌, ‘ನೀವು ಏನನ್ನು ಹೇಳಲು ಬಯಸಿದ್ದೀರಿ ಎಂಬುದನ್ನು ಒಂದೇ ವಾಕ್ಯದಲ್ಲಿ ಹೇಳಿಬಿಟ್ಟಿದ್ದೀರಿ. ನಾನು ಎಲ್ಲವನ್ನೂ ಅರ್ಥೈಸಿಕೊಂಡಿದ್ದೀನಿ. ನೀವು ಹೆಚ್ಚೇನೂ ಮಾತನಾಡುವ ಅಗತ್ಯವಿಲ್ಲ‘ ಎಂದು ಹೇಳಿದ್ದಾರೆ.
 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು