ಶುಕ್ರವಾರ, ಏಪ್ರಿಲ್ 10, 2020
19 °C

ಚಿತ್ರೀಕರಣ ಸಮಯದಲ್ಲಿ ಅಪಘಾತ: ತಮಿಳು ನಟ ತಲಾ ಅಜಿತ್‌ಗೆ ಸಣ್ಣ ಪುಟ್ಟ ಗಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ: ಕಾಲಿವುಡ್ ಖ್ಯಾತ ನಟ ತಲಾ ಅಜಿತ್‌ಗೆ ಚಿತ್ರೀಕರಣ ಸಮಯದಲ್ಲಿ ಅಪಘಾತವಾಗಿದ್ದು ಅವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ ಎಂದು 'ವಲಿಮೈ' ಚಿತ್ರತಂಡ ಹೇಳಿದೆ.

‘ಅಜಿತ್‌  ವಲಿಮೈ’ ಚಿತ್ರದ ಫೈಟಿಂಗ್‌ ಸನ್ನಿವೇಶದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು. ಈ ವೇಳೆ ಬೈಕ್‌ ಚೇಸಿಂಗ್‌ ಮಾಡುವಾಗ ಬೈಕ್‌ನಿಂದ ಅವರು ಕೆಳಗೆ ಬಿದ್ದಿದ್ದಾರೆ. ಅದೃಷ್ಟವಶಾತ್‌ ಅಜಿತ್ ಪ್ರಾಣಾಪಾಯದಿಂದ ಪಾರಾಗಿದ್ದು ಅವರ ತೋಳು ಮತ್ತು ಕಾಲಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. 

ಕೆಳಗೆ ಬಿದ್ದ ಬಳಿಕ, 20 ನಿಮಿಷಗಳ ಬಿಡುವು ಪಡೆದು ಚಿತ್ರೀಕರಣ ಪೂರ್ಣಗೊಳಿಸಿದ್ದಾರೆ. ನಂತರ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ವೈದ್ಯರು ಕೆಲವು ದಿನಗಳು ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ.

ಟ್ವಿಟ್ಟರ್‌ನಲ್ಲಿ #GetWellSoonTHALA ಎಂಬುದು ಟ್ರೆಂಡ್‌ ಆಗಿದೆ.  ಅಜಿತ್‌ ಬೇಗನೆ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸುತ್ತಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು