ಸೋಮವಾರ, ಆಗಸ್ಟ್ 2, 2021
21 °C

ಅಮೀರ್‌ ಹೊಸ ಸ್ಟೈಲ್‌ಗೆ ಅಭಿಮಾನಿಗಳ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸದಾ ಹೊಸತನ ಮತ್ತು ವಿಭಿನ್ನ ಲುಕ್‌ನಿಂದ ಗಮನ ಸೆಳೆಯುವ ನಟ ಅಮೀರ್‌ ಖಾನ್ ಈ ಬಾರಿ ಬಿಳಿ ತಲೆಗೂದಲಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.

‘ಅಪ್ಪಂದಿರ ದಿನ’ದಂದು ಅಮೀರ್‌ ಖಾನ್‌ ಪುತ್ರಿ ಐರಾ ಖಾನ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಚಿತ್ರದಲ್ಲಿ ನೆರೆ ಕೂದಲಿನ ಹೊಸ ಹೇರ್‌ಸ್ಟೈಲ್‌ನಲ್ಲಿ ಅಮೀರ್‌ ಗಮನ ಸೆಳೆಯುತ್ತಾರೆ.  ‌ ‌ 

ಬ್ರ್ಯಾಂಡ್‌ ನ್ಯೂ ಗ್ರೇ ಹೇರ್‌ಸ್ಟೈಲ್‌ನಲ್ಲಿ ಅಮೀರ್ ವಿಭಿನ್ನವಾಗಿ ಕಾಣುತ್ತಾರೆ. ‘ಏನೇ ಮಾಡಿದರೂ ಹೊಸದಾಗಿ ಮತ್ತು ವಿಭಿನ್ನವಾಗಿ ಮಾಡುವುದು ಅಮೀರ್‌ ಗುಣ. ಪ್ರತಿ ಚಿತ್ರದಲ್ಲೂ ಅವರ ಲುಕ್‌, ಹೇರ್‌ಸ್ಟೈಲ್‌ ಕೂಡ ಭಿನ್ನವಾಗಿರುತ್ತದೆ‘ ಎಂದು ಅಭಿಮಾನಿಗಳು ಹೊಗಳಿದ್ದಾರೆ.

 
 
 
 

 
 
 
 
 
 
 
 
 

Happy Father's Day!❤🤗 Thanks for being you. . . . #fathersday #love

Ira Khan (@khan.ira) ರಿಂದ ಹಂಚಲಾದ ಪೋಸ್ಟ್ ಅವರು ರಂದು

ದಂಗಲ್‌ ಸಿನಿಮಾದಲ್ಲಿ ಅಮೀರ್‌ ಪುತ್ರಿಯರಾಗಿ ನಟಿಸಿದ್ದ ಫಾತೀಮಾ ಶೇಖ್‌ ಮತ್ತು ಸಾನ್ಯಾ ಮಲ್ಹೋತ್ರಾ ಕೂಡ ಅಮೀರ್ ಅವರ‌ ಹೊಸ ಕೇಶವಿನ್ಯಾಸವನ್ನು ಮೆಚ್ಚಿಕೊಂಡಿದ್ದಾರೆ. 

ಕರೀನಾ ಕಪೂರ್ ಜತೆ  ನಟಿಸಿರುವ ‘ಲಾಲ್ ಸಿಂಗ್‌ ಛಡ್ಡಾ’ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಇದು ಟಾಮ್‌ ಹಾಂಕ್ಸ್ ಅವರ ‘ಫಾರೆಸ್ಟ್‌ ಗಂಪ್‌’ ಚಿತ್ರದ ರಿಮೇಕ್‌. ಇದರಲ್ಲಿ ಆಮೀರ್‌ ಸಿಖ್‌ ವ್ಯಕ್ತಿಯ ಪಾತ್ರದಲ್ಲಿ ನಟಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು