ಭಾನುವಾರ, ಸೆಪ್ಟೆಂಬರ್ 26, 2021
25 °C

ಜಮ್ಮು-ಕಾಶ್ಮೀರದ ಹೊಸ ಸಿನಿಮಾ ನೀತಿ: ಅಮೀರ್ ಖಾನ್ ಸ್ವಾಗತ

ಪಿಟಿಐ Updated:

ಅಕ್ಷರ ಗಾತ್ರ : | |

Actor Aamir Khan. Credit: AFP Photo

ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಹೊಸದಾಗಿ ಪರಿಚಯಿಸಲಾಗಿರುವ ಸಿನಿಮಾ ನೀತಿ-2021 ಅನ್ನು ಬಾಲಿವುಡ್ ನಟ ಅಮೀರ್ ಖಾನ್ ಸ್ವಾಗತಿಸಿದ್ದಾರೆ.

ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ನೂತನ ಸಿನಿಮಾ ನೀತಿಯನ್ನು ಬಿಡುಗಡೆ ಮಾಡಿದ್ದಾರೆ. 

ನೂತನ ಸಿನಿಮಾ ನೀತಿ, ಕಣಿವೆ ರಾಜ್ಯದಲ್ಲಿನ ಸುಂದರ ದೃಶ್ಯಗಳು ಮತ್ತು ಶೂಟಿಂಗ್‌ಗೆ ಸೂಕ್ತವಾದ ತಾಣಗಳಲ್ಲಿ ಚಿತ್ರೀಕರಣಕ್ಕೆ ಅನುವು ಮಾಡಿಕೊಡಲಿದೆ.

ಬಾಲಿವುಡ್ ನಟ ಮತ್ತು ಚಿತ್ರ ನಿರ್ಮಾಪಕ ರಾಜ್‌ಕುಮಾರ್ ಹಿರಾನಿ ಅವರ ಭಾಗವಹಿಸುವಿಕೆಯಲ್ಲಿ ನಡೆದ ಸಮಾರಂಭದಲ್ಲಿ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೂತನ ಸಿನಿಮಾ ನೀತಿ-2021 ಅನ್ನು ಅನಾವರಣಗೊಳಿಸಿದರು.

ಅಮೀರ್ ಖಾನ್ ಪ್ರಸ್ತುತ ‘ಲಾಲ್ ಸಿಂಗ್ ಛಡ್ಡಾ’ ಸಿನಿಮಾದ ಚಿತ್ರೀಕರಣಕ್ಕಾಗಿ ಶ್ರೀನಗರದಲ್ಲಿದ್ದಾರೆ.

ಹೊಸ ಸಿನಿಮಾ ನೀತಿಯಿಂದ ಚಿತ್ರರಂಗಕ್ಕೆ ಮಾತ್ರವಲ್ಲದೆ, ಇಲ್ಲಿನ ಜನತೆಗೂ ಅನುಕೂಲವಾಗಲಿದೆ. ಚಿತ್ರೀಕರಣಕ್ಕೆ ಸೂಕ್ತ ಸೌಲಭ್ಯ ಮತ್ತು ಅವಕಾಶಗಳನ್ನು ನೂತನ ನೀತಿ ಒದಗಿಸುವುದರಿಂದ ಹೆಚ್ಚಿನ ಪ್ರಯೋಜನವಿದೆ, ಇದಕ್ಕಾಗಿ ಸರ್ಕಾರಕ್ಕೆ ಧನ್ಯವಾದ ಎಂದು ನಟ ಅಮೀರ್ ಖಾನ್ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು