ಸೋಮವಾರ, ಜೂನ್ 21, 2021
29 °C

ಮರಾಠಿ ನಟಿ ಅಭಿಲಾಷಾ ಪಾಟೀಲ್‌ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಬೈ: ಮರಾಠಿ ಚಿತ್ರಗಳ ಪೋಷಕ ನಟಿ ಅಭಿಲಾಷಾ ಪಾಟೀಲ್‌ (40) ಅವರು ಗುರುವಾರ ನಿಧನರಾದರು. ಮರಾಠಿ ಜನಪ್ರಿಯ ಚಲನಚಿತ್ರಗಳಾದ ‘ತುಜಾ ಮಂಜಾ ಅರೇಂಜ್ ಮ್ಯಾರೇಜ್’, ‘ಬೇಕೊ ದೇತಾ ಕಾ ಬೈಕೊ’, ‘ಪಿಪ್ಸಿ’ ಮುಂತಾದವುಗಳಲ್ಲಿ ನಟಿಸಿದ್ದಾರೆ.

ಬಾಲಿವುಡ್‌ನ ‘ಬದ್ರೀನಾಥ್ ಕಿ ದುಲ್ಹಾನಿಯಾ’, ‘ಗುಡ್ ನ್ಯೂಜ್’, ಮತ್ತು ‘ಚಿಚೋರೆ’ಯಂತಹ ಅನೇಕ ಜನಪ್ರಿಯ ಚಿತ್ರಗಳಲ್ಲೂ ಅವರು ನಟಿಸಿದ್ದರು. ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಜೊತೆಗೂ ಒಂದು ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಅವರಿಗೆ ಪತಿ ಮತ್ತು ಪುತ್ರ ಇದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು