ಭಾನುವಾರ, ಮಾರ್ಚ್ 7, 2021
29 °C

ಜೀ ಸ್ಟುಡಿಯೊ–ಸಾಹೊ ಸುಜಿತ್ ಸಾರಥ್ಯದಲ್ಲಿ ಆ್ಯಕ್ಷನ್ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್ ಸ್ಟಾರ್ ಪ್ರಭಾಸ್ ಅಭಿನಯದ ‘ಸಾಹೊ’ ಸಿನಿಮಾದ ಮೂಲಕ ಖ್ಯಾತಿ ಗಳಿಸಿದ್ದ ನಿರ್ದೇಶಕ ಸುಜಿತ್ ಜೀ ಸ್ಟುಡಿಯೊ ಸಾರಥ್ಯದಲ್ಲಿ ಆ್ಯಕ್ಷನ್ ಥ್ರಿಲ್ಲರ್ ಸಿನಿಮಾಕ್ಕೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗಿದ್ದಾರೆ. 30 ವರ್ಷದ ಈ ಯುವ ನಿರ್ದೇಶಕ 2014ರ ತೆಲುಗಿನ ರೊಮ್ಯಾಂಟಿಕ್ ಕಾಮಿಡಿ ಚಿತ್ರ ‘ರನ್‌ ರಾಜ ರನ್’ ಸಿನಿಮಾದ ಮೂಲಕ ನಿರ್ದೇಶಕನ ಪಟ್ಟಕ್ಕೇರಿದ್ದರು. ಇನ್ನೂ ಹೆಸರಿಡದ ಚಿತ್ರದಲ್ಲಿ ಥ್ರಿಲ್ಲರ್ ಆ್ಯಕ್ಷನ್ ಹಾಗೂ ಭಾವನಾತ್ಮಕ ಅಂಶಗಳಿವೆ ಎಂದಿದ್ದಾರೆ ಸುಜಿತ್.

‘ಜೀ ಸ್ಟುಡಿಯೊದ ಹೊಸ ಪ್ರಾಜೆಕ್ಟ್‌ನೊಂದಿಗೆ ಕೆಲಸ ಮಾಡಲು ನಾನು ತುಂಬಾನೇ ಉತ್ಸುಕನಾಗಿದ್ದೇನೆ. ಸಾಹೊ ಸಂಪೂರ್ಣ ಆ್ಯಕ್ಷನ್ ಚಿತ್ರ. ಆದರೆ ಈ ಬಾರಿ ಆ್ಯಕ್ಷನ್‌ನೊಂದಿಗೆ ಭಾವನಾತ್ಮಕ ಅಂಶಗಳಿರುವ ಚಿತ್ರವನ್ನು ನಿರ್ದೇಶಿಸುತ್ತಿದ್ದೇನೆ. ಸಿನಿಮಾ ಆರಂಭದ ದಿನಕ್ಕಾಗಿ ತುದಿಗಾಲಿನಲ್ಲಿ ನಿಂತಿದ್ದೇನೆ’ ಎಂದಿದ್ದಾರೆ ನಿರ್ದೇಶಕ.

‘ನಮ್ಮ ಮುಂದಿನ ಪ್ರಾಜೆಕ್ಟ್‌ ಅನ್ನು ಪ್ರತಿಭಾನ್ವಿತ ನಿರ್ದೇಶಕ ಸುಜಿತ್ ಜೊತೆ ಮಾಡುತ್ತಿರುವುದು ಸಂತಸ ತಂದಿದೆ. ಇವರು ಥ್ರಿಲ್ಲರ್ ಹಾಗೂ ಭಾವನಾತ್ಮಕ ಅಂಶ ಇರುವ ಕಥೆಯೊಂದನ್ನು ಬರೆದಿದ್ದಾರೆ. ಇದು 2022ರ ಉತ್ತಮ ಚಿತ್ರಗಳಲ್ಲಿ ಇದೂ ಒಂದಾಗಲಿದೆ’ ಎಂದಿದ್ದಾರೆ ಜೀ ಸ್ಟುಡಿಯೊದ ಸಿಇಒ ಶಾರಿಖ್ ಪಟೇಲ್‌.

ಈ ಚಿತ್ರದ ಬಗ್ಗೆ ಉಳಿದ ವಿವರಗಳು ಇನ್ನಷ್ಟೇ ಸಿಗಬೇಕಿದೆ. 2021ರ ಮಧ್ಯಭಾಗದಲ್ಲಿ ಚಿತ್ರ ಸೆಟ್ಟೇರುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು