ಗುರುವಾರ , ಮೇ 13, 2021
34 °C

ಬಾಲಿವುಡ್‌ ನಟ ಬಿಕ್ರಮ್‌ಜೀತ್ ಕನ್ವರ್‌ಪಾಲ್ ಕೋವಿಡ್‌ನಿಂದ ನಿಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಹಿಂದಿ ಚಿತ್ರರಂಗದ ನಟ ಮೇಜರ್ ಬಿಕ್ರಮ್‌ಜೀತ್ ಕನ್ವರ್‌ಪಾಲ್ (52) ಅವರು ಕೋವಿಡ್‌ನಿಂದಾಗಿ ನಿಧನರಾದರು. ಕೋವಿಡ್‌ನಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ಸಮಸ್ಯೆ ತೀವ್ರಗೊಂಡಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮೃತಪಟ್ಟರು.

‘ಪೇಜ್ 3’, ‘ರಾಕೆಟ್‌ಸಿಂಗ್‌’, ‘ಆರಕ್ಷಕನ್’, ‘ಮರ್ಡರ್‌–2’, ‘2 ಸ್ಟೇಟ್ಸ್’, ‘ಘಾಜಿ ಅಟ್ಯಾಕ್’, ‘ರಹಸ್ಯ್’ ಸೇರಿ ಸಾಕಷ್ಟು ಚಿತ್ರಗಳಲ್ಲಿ ಅವರು ನಟಿಸಿದ್ದಾರೆ. ಇತ್ತೀಚೆಗೆ ಡಿಸ್ನಿ ಹಾಟ್‌ಸ್ಟಾರ್‌ನ ವೆಬ್‌ಸಿರೀಸ್‌ನಲ್ಲಿ ನಟಿಸಿದ್ದರು. ಕಿರುತೆರೆ ಸರಣಿಗಳ ಪೋಷಕ ಪಾತ್ರಗಳಲ್ಲಿ ಅವರು ಕಾಣಿಸಿಕೊಂಡಿದ್ದರು.

ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ಬಿಕ್ರಮ್‌ಜೀತ್‌ 2003ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಬಿಕ್ರಮ್‌ ಜೀತ್‌ ನಿಧನಕ್ಕೆ ಬಾಲಿವುಡ್‌ ಕಂಬನಿ ಮಿಡಿದಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು