‘ಪೊಗರು’ ಸಿನಿಮಾ ಬಳಿಕ ನಟ ಧ್ರುವ ಸರ್ಜಾ ಮತ್ತೆ ನಂದಕಿಶೋರ್ ಕಾಂಬಿನೇಷನ್ನಲ್ಲಿ ‘ದುಬಾರಿ’ ಚಿತ್ರದಲ್ಲಿ ನಟಿಸಲಿದ್ದಾರೆ ಎನ್ನುವ ಸುದ್ದಿ ಗಾಂಧಿನಗರದಲ್ಲಿ ಹರಿದಾಡಿತ್ತು. ಆದರೆ ಕಾರಣಾಂತರಗಳಿಂದ ಈ ಚಿತ್ರ ಸೆಟ್ಟೇರಲಿಲ್ಲ. ಇದೀಗ ಧ್ರುವ ಸರ್ಜಾ ಅವರ ಮುಂದಿನ ಸಿನಿಮಾ ಘೋಷಣೆಯಾಗಿದ್ದು, ‘ಅದ್ದೂರಿ’ ಜೋಡಿ ಇದೀಗ ಮತ್ತೆ ಕೈಜೋಡಿಸಿದೆ.

ನಿರ್ದೇಶಕ ಎ.ಪಿ.ಅರ್ಜುನ್ ನಿರ್ದೇಶನದ ‘ಮಾರ್ಟಿನ್’ನಲ್ಲಿ ಧ್ರುವ ಸರ್ಜಾ ವಿಭಿನ್ನವಾಗಿ ರಗಡ್ಲುಕ್ನಲ್ಲಿ ಕಾಣಿಸಿಕೊಂಡಿದ್ದು, ಸ್ವಾತಂತ್ರ್ಯ ದಿನದಂದು ಚಿತ್ರದ ಫಸ್ಟ್ಲುಕ್, ಟೀಸರ್ ಹಾಗೂ ಮೋಷನ್ ಪೋಸ್ಟರ್ ಬಿಡುಗಡೆಯಾಗಿದೆ. ಈ ಪಾತ್ರಕ್ಕಾಗಿ ತಮ್ಮ ಮಾತಿನ ಶೈಲಿಯನ್ನು ಧ್ರುವ ಬದಲಾಯಿಸಿಕೊಂಡಿದ್ದಾರೆ. ಅರ್ಜುನ್ ನಿರ್ದೇಶನದ ‘ಅದ್ದೂರಿ’ ಮುಖಾಂತರ ಧ್ರುವ 2012ರಲ್ಲಿ ಚಂದನವನಕ್ಕೆ ಪ್ರವೇಶಿಸಿದ್ದರು.

ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅರ್ಜುನ್, ‘ನನ್ನ ಎರಡನೇ ಸಿನಿಮಾ ‘ಅದ್ದೂರಿ’. ಧ್ರುವ ಸರ್ಜಾ ಅವರಿಗೆ ಅದು ಮೊದಲನೇ ಸಿನಿಮಾ. ಆಗ ನಾವಿಬ್ಬರೂ ಚಿತ್ರರಂಗಕ್ಕೆ ಹೊಸಬರೇ. ‘ಅದ್ದೂರಿ’ ನಂತರ ಮತ್ತೆ ಜೊತೆಯಾಗಿ ಸಿನಿಮಾ ಮಾಡಬೇಕು ಎಂದುಕೊಂಡಿದ್ದೆವು. ಆದರೆ ಕಾರಣಾಂತರಗಳಿಂದ ಈ ಯೋಜನೆ ಮುಂದಕ್ಕೆ ಹೋಗುತ್ತಿತ್ತು. ಪ್ರತಿಯೊಂದು ಸಿನಿಮಾಗಳೂ ಜವಾಬ್ದಾರಿ ಹೆಚ್ಚಿಸುತ್ತದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವ ‘ಮಾರ್ಟಿನ್’ ಐದು ಭಾಷೆಗಳಲ್ಲಿ ತೆರೆ ಕಾಣಲಿದ್ದು, ಚಿತ್ರತಂಡದ ಮೇಲೆ ಜವಾಬ್ದಾರಿ ಹೆಚ್ಚಿದೆ’ ಎನ್ನುತ್ತಾರೆ ಅರ್ಜುನ್.

ಧ್ರುವ ಸರ್ಜಾ ಮಾತನಾಡಿ, ‘ಒಂದು ಸಿನಿಮಾ ಹಿಟ್ ಆಗಲು ಹೀರೊ ಕಾರಣವಲ್ಲ. ಇಡೀ ಚಿತ್ರತಂಡ ಚೆನ್ನಾಗಿರಬೇಕು. ಅದಕ್ಕೆ ಉತ್ತಮ ಉದಾಹರಣೆ ‘ಅದ್ದೂರಿ’. 9 ವರ್ಷ ಆದ ಮೇಲೆ ಅದೇ ತಂಡದ ಜೊತೆ ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ಜವಾಬ್ದಾರಿ ಜಾಸ್ತಿ ಆಗಿದೆ ಎನ್ನುವ ಭಯ ಇದೆ. ‘ಮಾರ್ಟಿನ್’ ಎಂದಾಕ್ಷಣ ಹೀರೊ ಹೆಸರು ‘ಮಾರ್ಟಿನ್’ ಎಂದಲ್ಲ. ಮಾರ್ಟಿನ್ ಅನ್ನೋದು ಯಾರು ಎನ್ನುವುದೇ ಸಿನಿಮಾ. ಚಿತ್ರದ ಪ್ರತಿಯೊಂದು ಡೈಲಾಗ್ನಲ್ಲಿ ತೂಕವಿದೆ. ಚಿತ್ರಕ್ಕಾಗಿ ನನ್ನನ್ನು ನಾನು ಬದಲಾಯಿಸಿಕೊಂಡಿದ್ದೇನೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.