ಸೋಮವಾರ, 2 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಮಗುವಿಗೆ ಜನ್ಮ ನೀಡಿದ ನಟಿ ಇಲಿಯಾನಾ ಡಿಕ್ರೂಜ್

Published 6 ಆಗಸ್ಟ್ 2023, 9:34 IST
Last Updated 6 ಆಗಸ್ಟ್ 2023, 9:34 IST
ಅಕ್ಷರ ಗಾತ್ರ

ಬಾಲಿವುಡ್‌ ನಟಿ ಇಲಿಯಾನಾ ಡಿಕ್ರೂಜ್‌ ಗಂಡು ಮಗುವಿನ ತಾಯಿಯಾಗಿದ್ದಾರೆ.

ಶನಿವಾರ ಈ ವಿಷಯವನ್ನು ಬಹಿರಂಗಪಡಿಸಿರುವ ಇಲಿಯಾನಾ, ಮಗುವಿನ ಪೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ. ಮಗುವಿಗೆ ಕೋಯಿ ಫೀನಿಕ್ಸ್ ಡೋಲನ್ ಎಂದು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ.

ಅತಿಯಾ ಶೆಟ್ಟಿ, ನರ್ಗೀಸ್ ಫಕ್ರಿ ಸೇರಿದಂತೆ ಹಲವು ತಾರೆಯರು ಇಲಿಯಾನಾಗೆ ಶುಭಾಶಯ ತಿಳಿಸಿದ್ದಾರೆ.

ಮದುವೆಯಾಗದೆ ಗರ್ಭಿಣಿಯಾಗಿರುವುದಕ್ಕೆ ಟ್ರೋಲ್‌!

ಏಪ್ರಿಲ್‌ ತಿಂಗಳಲ್ಲಿ ತಾವು ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗಪಡಿಸಿದ ಇಲಿಯಾನಾ, ಮಗುವಿನ ತಂದೆ ಯಾರು ಎಂಬುವುದರ ಬಗ್ಗೆ ಸುಳಿವು ನೀಡಿರಲಿಲ್ಲ. ಮದುವೆಯಾಗದೆ ಗರ್ಭಿಣಿಯಾಗಿದ್ದಾರೆ ಎಂಬ ಕಾರಣಕ್ಕೆ ಇಲಿಯಾನ ಹಲವಾರು ಟ್ರೋಲ್‌ಗಳನ್ನು ಎದುರಿಸಿದ್ದರು.

ಬಾಯ್‌ಫ್ರೆಂಡ್‌ ಮುಖ ತೋರಿಸಿದ್ದ ಇಲಿಯಾನಾ

ಗರ್ಭಿಣಿಯಾದ ವಿಷಯ ಬಹಿರಂಗಪಡಿಸಿದ ನಾಲ್ಕು ತಿಂಗಳ ಬಳಿಕ ಇಲಿಯಾನಾ ತಮ್ಮ ಬಾಯ್‌ಫ್ರೆಂಡ್‌ ಬಗ್ಗೆ ಸುಳಿವು ನೀಡಿದ್ದರು. 'ಡೇಟ್‌ ನೈಟ್‌' ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಹಾಕಿರುವ ಇಲಿಯಾನಾ ಬಾಯ್‌ಫ್ರೆಂಡ್‌ ಮುಖ ತೋರಿಸಿದ್ದರು. ತಮ್ಮ ಬಾಯ್‌ಫ್ರೆಂಡ್‌ ಹೆಸರೆನೆಂಬುವುದನ್ನು ಇದುವೆರೆಗೂ ಹೇಳಿಕೊಂಡಿಲ್ಲ.

ಇದಕ್ಕೂ ಮುನ್ನ ಕತ್ರಿನಾ ಕೈಫ್‌ ಸಹೋದರನ ಜೊತೆ ಇಲಿಯಾನಾ ಡೇಟಿಂಗ್‌ ನಡೆಸುತ್ತಿದ್ದರು. ಮೊದಲು ಕತ್ರಿನಾ ಸಹೋದರನೇ ಮಗುವಿನ ತಂದೆ ಎಂದು ಹೇಳಲಾಗಿತ್ತು. ಬಾಯ್‌ಫ್ರೆಂಡ್ ಮುಖ ತೋರಿಸುವ ಮೂಲಕ ಮಗುವಿನ ತಂದೆ ಕತ್ರಿನಾ ಸಹೋದರ ಅಲ್ಲವೆಂದು ಖಚಿತಪಡಿಸಿದ್ದಾರೆ.

ಎಲ್ಲ ಭಾಷೆಗಳಲ್ಲೂ ನಟಿಸಿದ್ದ ಮೂಡಿಸಿದ್ದ ನಟಿ

18ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದ ಇಲಿಯಾನಾ, ದಕ್ಷಿಣ ಭಾರತ ಮತ್ತು ಬಾಲಿವುಡ್‌ ಚಿತ್ರರಂಗದಲ್ಲಿ ಮಿಂಚಿದ್ದರು. ಬರ್ಫಿ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ ಅವರು ನಂತರ ರುಸ್ತುಂ, ಮೇನ್‌ ತೇರಾ ಹೀರೋ ಚಿತ್ರಗಳಲ್ಲಿಯೂ ನಟಿಸಿದ್ದರು. ತೆಲುಗು–ತಮಿಳು ಚಿತ್ರರಂಗದಲ್ಲಿ ಬೇಡಿಕೆಯ ನಟಿ ಎನಿಸಿಕೊಂಡಿದ್ದರು. ಕನ್ನಡದಲ್ಲಿ ಇಂದ್ರಜಿತ್‌ ನಿರ್ಧೇಶನದ ‘ಹುಡುಗ ಹುಡುಗಿ‘ ಚಿತ್ರದ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT