ಚಿತ್ರಕ್ಕೆ ‘ಆಪರೇಷನ್ ಕೊಂಬುಡಿಕ್ಕಿ’ ಎಂಬ ಶೀರ್ಷಿಕೆ ಇಡಲಾಗಿದೆ. ‘ಸಿಲ್ವರ್ ಸ್ಕ್ರೀನ್ ಸ್ಟುಡಿಯೋಸ್’ ಎಂಬ ನಿರ್ಮಾಣ ಸಂಸ್ಥೆಯಡಿ ಈ ಸಿನಿಮಾವನ್ನು ಅನುಪ್ ನಿರ್ಮಾಣ ಮಾಡುತ್ತಿದ್ದಾರೆ. ‘ಕಂಠಿ’ ಸಿನಿಮಾ ಮೂಲಕ ಚಿತ್ರರಂಗಕ್ಕೆ ಹೆಜ್ಜೆ ಇಟ್ಟು, ಹಿಂದಿ ವೆಬ್ ಸರಣಿಯಲ್ಲೂ ನಟಿಸಿ ದಕ್ಷಿಣ ಭಾರತದ ಬೇಡಿಕೆಯ ನಟರಾಗಿರುವ ಕಿಶೋರ್ ಈ ಸಿನಿಮಾದ ನಾಯಕ. ‘ಕೆ.ಜಿ.ಎಫ್.’, ‘ಸಲಾರ್’ ಖ್ಯಾತಿಯ ರವಿ ಬಸ್ರೂರ್ ಈ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ. ಛಾಯಾಚಿತ್ರಗ್ರಾಹಕರಾಗಿ ಕರುಣಾಕರ್, ದೀಪು ಎಸ್.ಕುಮಾರ್ ಸಂಕಲನ ಈ ಚಿತ್ರಕ್ಕಿದೆ.