ಹೈದರಾಬಾದ್: ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದಡಿ ತೆಲುಗು ನಟ ಮೋಹನ್ ಬಾಬು ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಮೋಹನ್ ಬಾಬು ಮತ್ತು ಅವರ ಕಿರಿಯ ಮಗ ಮನೋಜ್ ನಡುವಿನ ವಿವಾದದ ಬಗ್ಗೆ ವರದಿ ಮಾಡಲು ಜಲಪಲ್ಲಿ ನಿವಾಸಕ್ಕೆ ಭೇಟಿ ನೀಡಿದಾಗ ಈ ಘಟನೆ ನಡೆದಿದೆ. ಮೋಹನ್ ಬಾಬು ಹಾಗೂ ಹಿರಿಯ ಮಗ ವಿಷ್ಣು ಪತ್ರಕರ್ತರ ಮೇಲೆ ಆಕ್ರಮಣಕಾರಿ ದಾಳಿ ನಡೆಸಿದ್ದಾರೆ ಎಂದು ಪತ್ರಕರ್ತರೊಬ್ಬರು ದೂರಿನಲ್ಲಿ ಉಲ್ಲೇಖಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
.ಕೈಯಲ್ಲಿ ತ್ರಿವರ್ಣ ಧ್ವಜ, ಕೆಂಪು ಗುಲಾಬಿ; ಸುಗಮ ಕಲಾಪಕ್ಕೆ ವಿಪಕ್ಷಗಳ ಮನವಿ.ಜಾರ್ಜ್ ಸೊರೋಸ್ ಜತೆ ನೆಹರೂ – ಗಾಂಧಿ ಕುಟುಂಬದ ಆಳವಾದ ಸಂಬಂಧ: ಬಿಜೆಪಿ ಆರೋಪ.
'ನಟ ಮೋಹನ್ ಬಾಬು ಅವರು ನಮ್ಮ ಮೈಕ್ರೊಫೋನ್ ಅನ್ನು ಕಿತ್ತುಕೊಂಡು, ಅವಾಚ್ಯ ಪದಗಳಿಂದ ನಮ್ಮನ್ನು ನಿಂದಿಸಿದ್ದಾರೆ ಎಂದು ಮಾಧ್ಯಮವೊಂದರ ಛಾಯಾಗ್ರಾಹಕರು' ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

'ಕೌಟುಂಬಿಕ ಕಲಹವು ಆಸ್ತಿಯ ಪಾಲಿಗಾಗಿ ಅಲ್ಲ. ನನ್ನ ಸ್ವಾಭಿಮಾನ ಹಾಗೂ ನನ್ನ ಹೆಂಡತಿ, ಮಕ್ಕಳ ಸುರಕ್ಷತೆಗಾಗಿ ಎಂದು ಮನೋಜ್ ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ರಕ್ಷಣೆಗಾಗಿ ಪೊಲೀಸ್ ಭದ್ರತೆಯನ್ನು ಕೋರಿದ್ದೇವೆ' ಎಂದೂ ಮನೋಜ್ ತಿಳಿಸಿದ್ದಾರೆ.
.ಸಿರಿಯಾ ಸರ್ಕಾರ ಪತನ ಇಸ್ರೇಲ್, ಅಮೆರಿಕದ ಜಂಟಿ ಯೋಜನೆ: ಇರಾನ್ ಪರಮೋಚ್ಛ ನಾಯಕ.Video | ಭಾರತಕ್ಕೆ ಬಂದ ನೇಪಾಳದ ಸೇನಾ ಮುಖ್ಯಸ್ಥ.
'ಕೌಟುಂಬಿಕ ಕಲಹವು ಮಾತುಕತೆಯ ಮೂಲಕ ಶಾಂತಿಯುತವಾಗಿ ಬಗೆಹರಿಯಲಿದೆ'ಎಂದು ವಿಷ್ಣು ಹೇಳಿದ್ದಾರೆ.

ಹಲ್ಲೆ ಸಂಬಂಧ ನಟ ಮೋಹನ್ ಬಾಬು ಪತ್ರಕರ್ತರಿಗೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿ, ಪ್ರತಿಭಟನೆ ನಡೆಸಲಾಯಿತು. ಈ ನಡುವೆ ಮೋಹನ್ ಬಾಬು ಅನಾರೋಗ್ಯ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ.

ಪತ್ರಕರ್ತರ ದೂರು ಆಧರಿಸಿ, ಭಾರತೀಯ ನ್ಯಾಯಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ
.ಶರಾವತಿ ಸಂತ್ರಸ್ತರ ಸಮಸ್ಯೆ: ಲೋಕಸಭೆಯಲ್ಲಿ ಪ್ರಸ್ತಾಪಿಸಿದ ಸಂಸದ ಬಿ.ವೈ.ರಾಘವೇಂದ್ರ.ಛತ್ತೀಸಗಢದಲ್ಲಿ ಐಇಡಿ ಸ್ಫೋಟ | ಇಬ್ಬರು ಯೋಧರಿಗೆ ಗಾಯ: ಓರ್ವ ನಕ್ಸಲ್ ಹತ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.