ಶನಿವಾರ, ಜುಲೈ 2, 2022
25 °C

ಪರಿಸರ ಸ್ನೇಹಿ ಸೈಕಲ್‌ನೊಂದಿಗೆ ನಟ ನಿಖಿಲ್ ಸಿದ್ಧಾರ್ಥ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನಿಖಿಲ್ ಸಿದ್ಧಾರ್ಥ್‌

ಟಾಲಿವುಡ್‌ನಲ್ಲಿ ಚಾಕೋಲೆಟ್‌ ಬಾಯ್‌‌ ಪಾತ್ರಗಳನ್ನೇ ಹೆಚ್ಚಾಗಿ ನಿರ್ವಹಿಸುತ್ತಿದ್ದ ನಟ ನಿಖಿಲ್ ಸಿದ್ಧಾರ್ಥ್‌ ‘ಹ್ಯಾಪಿ ಡೇಸ್’ ಸಿನಿಮಾದ ಮೂಲಕ ಖ್ಯಾತಿ ‍ಪಡೆದವರು. ತೆಲುಗು ಸಿನಿರಂಗದಲ್ಲಿ ತನ್ನದೇ ಶೈಲಿಯ ನಟನೆಯಿಂದ ಹೆಸರು ಗಳಿಸಿದ ಇವರು‌ ಮದುವೆಯ ನಂತರವೂ ಮಿಸ್ಟರ್‌. ಫಿಟ್‌ನೆಸ್‌ನಂತೆ ಕಾಣಿಸುತ್ತಿದ್ದಾರೆ.

ಮೊದಲಿನಿಂದಲೂ ಫಿಟ್‌ನೆಸ್‌ ಮೇಲೆ ವಿಪರೀತ ಒಲವು ಹೊಂದಿರುವ ಇವರು‌ ದೇಹದಂಡನೆಗೆಂದೇ ದಿನದಲ್ಲಿ ಒಂದಷ್ಟು ಸಮಯವನ್ನು ಮೀಸಲಿಡುತ್ತಿದ್ದರು. ಸದಾ ದೇಹವನ್ನು ಫಿಟ್‌ ಆಗಿರಿಸಿಕೊಂಡಿರುವ ಕಾರಣಕ್ಕೆ ಟಾಲಿವುಡ್‌ನಲ್ಲಿ ‘ಮಾಕೋ ಮ್ಯಾನ್’‌ ಎನ್ನಿಸಿಕೊಂಡಿದ್ದಾರೆ ನಿಖಿಲ್‌.

ಬಹುತೇಕ ಭಾರತೀಯ ಯುವಕ–ಯುವತಿಯರು ಬ್ಯಾಚುಲರ್ ಜೀವನದಿಂದ ಸಾಂಸಾರಿಕ ಜೀವನಕ್ಕೆ ಕಾಲಿಟ್ಟ ನಂತರ ಫಿಟ್‌ನೆಸ್‌ ಮೇಲೆ ಅಷ್ಟೊಂದು ಗಮನ ಹರಿಸುವುದಿಲ್ಲ. ಆದರೆ ಅಂತಹವರಲ್ಲಿ ನಿಖಿಲ್ ಅಪರೂಪದವರೆನ್ನಿಸಿಕೊಳ್ಳುತ್ತಾರೆ. ಇತ್ತೀಚೆಗಷ್ಟೇ ನಿಖಿಲ್ ಮದುವೆ ಹೈದಾರಾಬಾದ್‌ನಲ್ಲಿ ನೆರವೇರಿತ್ತು.

ಫಿಟ್‌ನೆಸ್‌ ಆಯಾಮದಲ್ಲಿ ಇನ್ನೊಂದು ಹೆಜ್ಜೆ ಇರಿಸಿರುವ ನಿಖಿಲ್‌ ಹೊಸ ಸೈಕಲ್‌ ಖರೀದಿಸಿದ್ದಾರೆ. ಆ ಮೂಲಕ ಪರಿಸರ ಹಾನಿಯನ್ನು ತಪ್ಪಿಸುವ ಯೋಚನೆಯನ್ನೂ ಮಾಡಿದಂತಿದೆ‌. ಇವರು ಈ ಬಗ್ಗೆ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಟ್ವಿಟ್ಟರ್‌ನಲ್ಲಿ ಸೈಕಲ್‌ ಮೇಲೆ ಕುಳಿತಿರುವ ಫೋಟೊ ಹಂಚಿಕೊಂಡು ‘ಇವ್‌ಕನೆಕ್ಟ್ಸ್‌ ಕಡೆಯಿಂದ ಇಲೆಕ್ಟ್ರಿಕ್‌ ಸೈಕಲ್‌ ಕಂಡುಕೊಂಡಿದ್ದೇನೆ. ಇದಕ್ಕೆ ಒಮ್ಮೆ ಜಾರ್ಜ್ ಮಾಡಿದರೆ 89 ಕಿ.ಮೀ ದೂರ ಓಡಿಸಬಹುದು ಹಾಗೂ 30 ಕಿ.ಮೀ ದೂರದವರೆಗೂ ಹೈ ಸ್ಪೀಡ್‌ ಇರುತ್ತದೆ. ವಾಹನಗಳ ಹೊಗೆಯಿಂದ ಭೂಮಿಯನ್ನು ಕಾಪಾಡುವುದು ನಮ್ಮ ಮುಖ್ಯ ಗುರಿಯಾಗಬೇಕು’ ಎಂದು ಬರೆದುಕೊಂಡಿದ್ದಾರೆ.

ಇತ್ತೀಚೆಗೆ ಯುವಜನರು ಇಲೆಕ್ಟ್ರಿಕ್‌ ವಾಹನಗಳ ಮೇಲೆ ಹೆಚ್ಚು ಒಲವು ತೋರುತ್ತಿದ್ದು ಹೊಗೆಯುಗುಳುವ ದ್ವಿಚಕ್ರ ವಾಹನಗಳಿಗೆ ಗುಡ್‌ ಬೈ ಹೇಳುತ್ತಿದ್ದಾರೆ. ಇದು ಆಸಕ್ತಿದಾಯಕ ಎನ್ನಿಸಿದೆ. ಅಲ್ಲದೇ ಪ್ರತಿ ಇಂಧನ ಬಂಕ್‌ಗಳಲ್ಲಿ ಚಾರ್ಜಿಂಗ್ ಪಾಯಿಂಟ್ ಅಳವಡಿಸಿದರೆ ಇನ್ನಷ್ಟು ಅನುಕೂಲವಾಗುತ್ತದೆ. ಜೊತೆಗೆ ಪರಿಸರ ಹಾನಿಯೂ ತಪ್ಪುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು