ಸೋಮವಾರ, ಆಗಸ್ಟ್ 15, 2022
27 °C

ಸಂಚಾರಿ ವಿಜಯ್ ಬಗ್ಗೆ ವಿಶೇಷ ವಿಡಿಯೋ ಹಂಚಿಕೊಂಡ ನಟ ನೀನಾಸಂ ಸತೀಶ್

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ ನಟ ಸಂಚಾರಿ ವಿಜಯ್ ಇನ್ನು ನೆನಪು ಮಾತ್ರ. ಹುಟ್ಟೂರಿನ ಮಣ್ಣಲ್ಲಿ ಮಣ್ಣಾಗಿರುವ ಅವರ ಬಗ್ಗೆ ಅನೇಕ ಜನ ಕನಿಕರ ಪಡುತ್ತಿದ್ದಾರೆ. ಅವರ ಆಪ್ತರು ಅವರೊಂದಿಗೆ ಕಳೆದ ನೆನಪುಗಳನ್ನು ಮೆಲಕು ಹಾಕುತ್ತಿದ್ದಾರೆ.

ನಟ ನೀನಾಸಂ ಸತೀಶ್ ಕೂಡ ಸಂಚಾರಿ ವಿಜಯ್ ಅವರ ಆಪ್ತ ಸ್ನೇಹಿತರು. ವಿಜಯ್ ಬಗ್ಗೆ ವಿಡಿಯೋ ಒಂದನ್ನು ಸತೀಶ್ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಕೊರೊನಾ ಲಾಕ್‌ಡೌನ್ ಸಂತ್ರಸ್ತರಿಗೆ ಆಹಾರದ ಕಿಟ್‌ಗಳನ್ನು ಹಂಚುವುದು, ಸಹಾಯ ಮಾಡುವುದನ್ನು ಮಾಡುತ್ತಿದ್ದ ಸಂಚಾರಿ ಅವರ ಮಾನವೀಯ ಗುಣಗಳನ್ನು ಸತೀಶ್ ನೆನಪಿಸಿದ್ದಾರೆ.

ಚೀಲಕ್ಕೆ ಅಕ್ಕಿಯನ್ನು ತುಂಬುತ್ತಿದ್ದ ಸಂಚಾರಿ ಬಗ್ಗೆ ಸತೀಶ್ ತಮಾಷೆ ಮಾಡುತ್ತಾ, ‘ನೀವು ರೇಷನ್ ತುಂಬುತ್ತಿರುವುದನ್ನು ನೋಡಿದರೆ, ನಿಮಗೆ ಇದರಲ್ಲೂ ರಾಷ್ಟ್ರ ಪ್ರಶಸ್ತಿ ಬಂದರೂ ಬರಬಹುದು‘ ಎಂದು ತಮಾಷೆ ಮಾಡುತ್ತಾರೆ.

ಆಗ, ವಿಜಯ್, ‘ಹೌದೌದು, ಅದು ನ್ಯಾಷನಲ್ ಅವಾರ್ಡ್ ಅಲ್ಲ, ರೇಷನಲ್ ಅವಾರ್ಡ್‌‘ ಎಂದು ತಮಾಷೆ ಮಾಡಿ ನಗುತ್ತಾರೆ. ಈ ಟ್ವೀಟ್ ಗೆ ಅನೇಕರು ವಿಜಯ್ ಬಗ್ಗೆ ಭಾವನಾತ್ಮಕವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

 

ಕಳೆದ ಶನಿವಾರ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಜೆಪಿ ನಗರದ ಬಳಿ ಅಪಘಾತ ಸಂಭವಿಸಿ ವಿಜಯ್ ತೀವ್ರವಾಗಿ ಗಾಯಗೊಂಡಿದ್ದರು. ಚಿಕಿತ್ಸೆ ಫಲಿಸದೇ ಅವರು ಮಂಗಳವಾರ ಬೆಳಿಗ್ಗೆ ಕೊನೆಯುಸಿರೆಳೆದಿದ್ದರು.

ಇದನ್ನೂ ಓದಿ: ಡೈಲಾಗ್‌ ಮರೆತರೂ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿಕೊಂಡಿದ್ದ ಸಂಚಾರಿ ವಿಜಯ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು