ಶನಿವಾರ, 7 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ವಿರುದ್ಧದ ಅತ್ಯಾಚಾರ ಆರೋಪ ಆಧಾರ ರಹಿತ: ಮಲಯಾಳ ನಟ ನಿವಿನ್ ಪೋಳಿ

Published 4 ಸೆಪ್ಟೆಂಬರ್ 2024, 3:16 IST
Last Updated 4 ಸೆಪ್ಟೆಂಬರ್ 2024, 3:16 IST
ಅಕ್ಷರ ಗಾತ್ರ

ಕೊಚ್ಚಿ: ತಮ್ಮ ವಿರುದ್ಧ ಕೇಳಿಬಂದಿರುವ ಅತ್ಯಾಚಾರ ಆರೋಪವನ್ನು ಆಧಾರ ರಹಿತ ಎಂದು ಹೇಳಿರುವ ಮಲಯಾಳ ನಟ ನಿವಿನ್‌ ಪೋಳಿ, ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ.

ನ್ಯಾ. ಹೇಮಾ ಸಮಿತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ಮಲಯಾಳ ಚಿತ್ರರಂಗದ ಹಲವು ಕಲಾವಿದರ ಮೇಲೆ ಲೈಂಗಿಕ ಕಿರುಕುಳ ನೀಡಿದ ಆರೋಪಗಳು ಕೇಳಿಬಂದಿದ್ದು, 40 ವರ್ಷದ ಮಹಿಳೆಯೊಬ್ಬರು ನಿವಿನ್‌ ಪೋಳಿ ವಿರುದ್ಧ ಮಂಗಳವಾರ(ಸೆ.03) ಅತ್ಯಾಚಾರ ಪ್ರಕರಣ ದಾಖಲಿಸಿದ್ದರು.

ಆರೋಪದ ಕುರಿತು ಎಕ್ಸ್‌ನಲ್ಲಿ ಹೇಳಿಕೆ ಬಿಡುಗಡೆ ಮಾಡಿರುವ ನಿವಿನ್‌, 'ನನ್ನ ವಿರುದ್ಧ ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಸುದ್ದಿಯೊಂದು ವರದಿಯಾಗಿದ್ದು, ಇದು ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಈ ಆರೋಪಗಳು ಆಧಾರ ರಹಿತವಾಗಿದೆ’ ಎಂದು ಹೇಳಿದ್ದಾರೆ.

‘ಈ ಆರೋಪಗಳು ಆಧಾರ ರಹಿತ ಎಂಬುದನ್ನು ಸಾಬೀತುಪಡಿಸಲು ಯಾವ ಹಂತಕ್ಕೂ ಹೋಗಲು ನಾನು ಸಿದ್ಧನಾಗಿದ್ದೇನೆ. ಆರೋಪ ಮಾಡಿರುವವರ ವಿರುದ್ಧ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೇನೆ. ನಿಮ್ಮ ಕಾಳಜಿಗೆ ಧನ್ಯವಾದಗಳು. ಉಳಿದ ವಿಷಯಗಳನ್ನು ಕಾನೂನಾತ್ಮಕವಾಗಿ ನಿರ್ವಹಿಸುತ್ತೇನೆ’ ಎಂದು ಹೇಳಿದರು.

‘ವರ್ಷದ ಹಿಂದೆ ದುಬೈನಲ್ಲಿ ನಿವಿನ್ ನನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ’ ಎಂದು ಮಹಿಳೆ ದೂರಿನಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT