ಶನಿವಾರ, ಜನವರಿ 23, 2021
26 °C

ರಾಜಕೀಯಕ್ಕೆ ಬರುವಂತೆ ಒತ್ತಾಯಿಸಿ ಮತ್ತೆ ಮತ್ತೆ ನೋವು ಕೊಡಬೇಡಿ: ರಜನಿಕಾಂತ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಚೆನ್ನೈ: ಪ್ರತಿಭಟನೆ ಮಾಡಿ ರಾಜಕೀಯಕ್ಕೆ ಬರುವಂತೆ ನನ್ನ ಮೇಲೆ ಒತ್ತಡ ಹೇರುವ ಮೂಲಕ ನನಗೆ ಪದೇ ಪದೇ ನೋವು ಕೊಡಬೇಕು ಎಂದು ನಟ ರಜನಿಕಾಂತ್ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 

ಈ ಹಿಂದೆ ಹೊಸ ಪಕ್ಷ ಸ್ಥಾಪಿಸುವ ಮೂಲಕ ರಾಜಕೀಯಕ್ಕೆ ಬರುವುದಾಗಿ ಹೇಳಿದ್ದ ರಜನಿಕಾಂತ್, ಆ ಬಳಿಕ ಆರೋಗ್ಯ ಹದ್ದಗೆಟ್ಟಿದ್ದರಿಂದ ರಾಜಕೀಯಕ್ಕೆ ಬರುವ ನಿರ್ಧಾರದಿಂದ ಹಿಂದೆ ಸರಿದಿದ್ದರು. ರಜನಿಯವರ ಈ ನಿರ್ಧಾರ ಸಹಜವಾಗಿಯೇ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತ್ತು. ರಜನಿಕಾಂತ್ ತಮ್ಮ ನಿರ್ಧಾರ ಹಿಂಪಡೆದು ರಾಜಕೀಯಕ್ಕೆ ಬರಬೇಕೆಂದು ಒತ್ತಾಯಿಸಿ ಅಭಿಮಾನಿ ಸಂಘ ನಿನ್ನೆ ಪ್ರತಿಭಟನೆ ನಡೆಸಿತ್ತು.

ಅಭಿಮಾನಿಗಳ ಪ್ರತಿಭಟನೆ  ಬಳಿಕ ಹೇಳಿಕೆ ಬಿಡುಗಡೆ ಮಾಡಿರುವ ರಜನಿಕಾಂತ್ ಪದೇ ಪದೇ ಪ್ರತಿಭಟನೆ ಮಾಡಿ ನನ್ನ ಮೇಲೆ ಒತ್ತಡ ಹಾಕುವ ಮೂಲಕ ನೋವು ಕೊಡಬೇಡಿ ಎಂದು ಮನವಿ ಮಾಡಿದ್ದಾರೆ. "ರಾಜಕೀಯಕ್ಕೆ ಬರಲು ಸಾಧ್ಯವಾಗದಿರುವ ನನ್ನ ಅಸಮರ್ಥತೆಯ ಕಾರಣಗಳನ್ನು ನಾನು ಈಗಾಗಲೇ ವಿವರಿಸಿದ್ದೇನೆ. ನನ್ನ ನಿರ್ಧಾರವನ್ನು ನಾನು ತಿಳಿಸಿದ್ದೇನೆ. ಆ ರೀತಿಯ ಪ್ರತಿಭಟನೆ ಆಯೋಜಿಸುವ ಮೂಲಕ ದಯವಿಟ್ಟು ಮತ್ತೆ ಮತ್ತೆ ರಾಜಕೀಯಕ್ಕೆ ಬನ್ನಿ ಎಂದು ಒತ್ತಾಯಿಸಿ ನನಗೆ ನೋವು ಕೊಡಬೇಡಿ," ಎಂದು ಮನವಿ ಮಾಡಿದ್ದಾರೆ.

ಪ್ರತಿಭಟನಾ ಕಾರ್ಯಕ್ರಮವನ್ನು ಶಿಸ್ತುಬದ್ಧ ಮತ್ತು ಘನತೆಯಿಂದ ನಡೆಸಿದ್ದಕ್ಕಾಗಿ ಧನ್ಯವಾದಗಳು" ಎಂದು ಅವರು ಇದೇ ಸಂದರ್ಭ ತಿಳಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು