ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿಗೆ ರಜನಿಕಾಂತ್: ಪಕ್ಷ ಆರಂಭಕ್ಕೂ ಮುನ್ನ ಅಣ್ಣನ ಆಶೀರ್ವಾದ ಪಡೆದ ತಲೈವಾ

Last Updated 7 ಡಿಸೆಂಬರ್ 2020, 12:05 IST
ಅಕ್ಷರ ಗಾತ್ರ

ಬೆಂಗಳೂರು:ಹೊಸ ಪಕ್ಷದ ಮೂಲಕ ರಾಜಕೀಯಕ್ಕೆ ಎಂಟ್ರಿ ಕೊಡುವುದಾಗಿ ಈಚೆಗೆ ಘೋಷಿಸಿದ್ದ ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್, ಭಾನುವಾರ ರಾತ್ರಿ ಬೆಂಗಳೂರಿಗೆ ಭೇಟಿ ನೀಡಿ ಅಣ್ಣ ಸತ್ಯನಾರಾಯಣ ಅವರ ಆಶೀರ್ವಾದ ಪಡೆದಿದ್ದಾರೆ ಎಂದು ಎಎನ್‌ಐ ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.

ಡಿಸೆಂಬರ್ 3 ರಂದು ಬೆಂಬಲಿಗರ ಸಭೆ ನಡೆಸಿದ್ದ ರಜಿನಿಕಾಂತ್, 2021ರ ಜನವರಿಯಲ್ಲಿ ಹೊಸ ಪಕ್ಷ ಸ್ಥಾಪಿಸುವುದಾಗಿ ಘೋಷಿಸಿದ್ದರು.

2021ರ ಏಪ್ರಿಲ್–ಮೇ ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಚುನಾವಣೆಯಲ್ಲಿ ನಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧಿಸಲಿದ್ದು, ಜನಬೆಂಬಲದೊಂದಿಗೆ ಅಧಿಕಾರಕ್ಕೆ ಬರುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದರು.

ಡಿಸೆಂಬರ್ 31ರಂದು ಪಕ್ಷ ಸ್ಥಾಪನೆ ಕುರಿತ ವಿಷಯಗಳ ಬಗ್ಗೆ ಪ್ರಕಟಿಸುವುದಾಗಿ ರಜನಿಕಾಂತ್ ಟ್ವೀಟ್ ಮಾಡಿದ್ದರು.

ಪ್ರಚಾರಕ್ಕೆ ಕರೆದರೆ ಹೋಗುವೆ:ಸತ್ಯನಾರಾಯಣ ರಾವ್

ಸುದ್ದಿಗಾರರ ಜೊತೆ ಮಾತನಾಡಿದ ಸತ್ಯನಾರಾಯಣ ರಾವ್‌, ‘ಕೋವಿಡ್‌ ಕಾಣಿಸಿಕೊಂಡ ಬಳಿಕರಜನಿಕಾಂತ್‌ ಅವರು ಒಮ್ಮೆಯೂ ಮನೆಗೆ ಬಂದಿರಲಿಲ್ಲ. ಚೆನ್ನೈನಿಂದ ಭಾನುವಾರ ರಾತ್ರಿ 8.30ಗೆ ಬಂದು ಇಲ್ಲೇ ಉಳಿದುಕೊಂಡಿದ್ದರು. ಬೆಳಗ್ಗಿನ ಜಾವ 5.30ಗೆ ಹೊರಟರು’ ಎಂದು ತಿಳಿಸಿದರು.

‘ಜಾತಿ ಧರ್ಮಗಳ ಭೇದ ಭಾವವಿಲ್ಲದೇ ಎಲ್ಲರೂ ಸಂತೋಷವಾಗಿರಬೇಕು ಎಂಬುದು ಅವರ ಇಚ್ಛೆ. ಅವರು ಯಾರಿಗೂ ತೊಂದರೆ ಆಗದಂತೆ ರಾಜಕೀಯ ಮಾಡುತ್ತಾರೆ. ತಮಿಳುನಾಡಿನ ರಾಜಕೀಯದಲ್ಲಿ ಅವರಿಗೆ ಖಂಡಿತಾ ಯಶಸ್ಸು ಸಿಗಲಿದೆ. ಅವರಿಗೆ ಗುರುಗಳ ಕೃಪೆಯೂ ಇದೆ. ತಮಿಳುನಾಡಿನ ರಾಜಕಾರಣವನ್ನು ಸರಿ ಮಾಡಲಿದ್ದಾರೆ’ ಎಂದರು.

‘ರಾಜಕೀಯದ ಕುರಿತು ಅವರು ನನ್ನ ಜೊತೆ ಯಾವುದೇ ಚರ್ಚೆ ನಡೆಸಿಲ್ಲ. ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂಬ ಬಗ್ಗೆ ತಿಳಿದಿಲ್ಲ. ಡಿ 31ರ ಬಳಿಕ ಎಲ್ಲವೂ ಗೊತ್ತಾಗಲಿದೆ. ಆದರೆ, ಅವರುಪ್ರಚಾರಕ್ಕೆ ಕರೆದರೆ ನಾನೂ ಹೋಗುತ್ತೇನೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT