ಆಪರೇಷನ್ ಅಲುಮೇಲಮ್ಮ ಹಾಗೂ ಕವಲುದಾರಿ ಸಿನಿಮಾ ಖ್ಯಾತಿಯ ನಟ ರಿಷಿ ಮದುವೆಗೆ ಸಿದ್ಧರಾಗಿದ್ದು, ನವೆಂಬರ್ 10ಕ್ಕೆ ದಾಂಪತ್ಯ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದಾರೆ.

ಬರಹಗಾರ್ತಿ ಸ್ವಾತಿ ಅವರೊಂದಿಗೆ ಹೈದರಾಬಾದ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ರಿಷಿ ಈಗ ಚೆನ್ನೈನಲ್ಲಿ ಹಸೆಮಣೆ ಏರಲು ಸಜ್ಜಾಗಿದ್ದಾರೆ.

ಕುಟುಂಬದವರಿಗೆ ಮತ್ತು ಆಪ್ತರಿಗೆ ಮದುವೆಗೆ ಆಹ್ವಾನ ನೀಡಲಾಗಿದೆ. ಬೆಂಗಳೂರಿನಲ್ಲಿ ನವೆಂಬರ್ 20ಕ್ಕೆ ಆರತಕ್ಷತೆಯನ್ನು ಹಮ್ಮಿಕೊಂಡಿದ್ದಾರೆ.

ಮದುವೆಯ ಆಮಂತ್ರಣ ಪತ್ರಿಕೆ ಕೂಡ ಸಿದ್ದವಾಗಿದ್ದು, ಆಕರ್ಷಕ ಬರಹಗಳಿಂದ ಪತ್ರಿಕೆ ಎಲ್ಲರ ಗಮನ ಸೆಳೆಯುತ್ತಿದೆ.

ಪ್ರೀತಿಯ ಆದೇಶ

ಮದುವೆಗೆ ಬರುವವರು ಯಾರು ಉಡುಗೊರೆ ತರಬೇಡಿ ಎಂದು ಪ್ರೀತಿಯ ಆದೇಶ ನೀಡಿರುವ ರಿಷಿ, ಉಡುಗೊರೆ ನೀಡಿದರೆ ಮಾತ್ರ ಸಂತರ ಎನ್ನುವುದಾದರೆ ಉತ್ಕರ್ಷ ಫೌಂಡೇಷನ್‌ಗೆ ಸಹಾಯ ನೀಡಬಹುದು ಎಂದು ಅಭಿಮಾನಿಗಳು, ಬಂಧು ಬಳಗವನ್ನು ಕೋರಿದ್ದಾರೆ.

ಈ ಆಮಂತ್ರಣ ಪತ್ರಿಕೆಯಲ್ಲಿ 'ನೀವು ನನಗೆ ಮದುವೆ ಗಿಫ್ಟ್ ಕೊಡಬೇಕೆಂದಿದ್ದರೆ ಅದನ್ನು ಉತ್ಕರ್ಷ ಫೌಂಡೇಷನ್‌ಗೆ ಕೊಡಿ ಎಂದು ಹೇಳಿದ್ದಾರೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.