ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಪತ್ರೆಗೆ ದಾಖಲಾದ ನಟ ಶಿವರಾಜ್‌ಕುಮಾರ್‌

Published 1 ಏಪ್ರಿಲ್ 2024, 12:41 IST
Last Updated 1 ಏಪ್ರಿಲ್ 2024, 12:41 IST
ಅಕ್ಷರ ಗಾತ್ರ

ಬೆಂಗಳೂರು: ನಿರಂತರವಾದ ಚುನಾವಣಾ ಪ್ರಚಾರ ಮತ್ತು ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಿದ ಬೆನ್ನಲ್ಲೇ ನಟ ಶಿವರಾಜ್‌ಕುಮಾರ್‌ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ನಗರದ ಖಾಸಗಿ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪ‍ಡೆಯುತ್ತಿದ್ದಾರೆ.

ದೇವನಹಳ್ಳಿ ಬಳಿ ಚಿತ್ರೀಕರಣದಲ್ಲಿ ಶಿವರಾಜ್‌ಕುಮಾರ್‌ ಭಾಗಿಯಾಗಿದ್ದರು. ಭಾನುವಾರ ಶೂಟಿಂಗ್‌ ಸಂದರ್ಭದಲ್ಲೇ ಸುಸ್ತು ಕಾಣಿಸಿಕೊಂಡ ಕಾರಣ ಆಸ್ಪತ್ರೆಗೆ ತೆರಳಿದ್ದರು. ಶೂಟಿಂಗ್‌ ಸೆಟ್‌ನಲ್ಲಿನ ದೂಳಿನ ಸಮಸ್ಯೆಯಿಂದ ಅನಾರೋಗ್ಯ ಉಂಟಾಗಿದೆ ಎನ್ನಲಾಗಿದ್ದು, ಕೇವಲ ಜನರಲ್‌ ಚೆಕ್‌ಅಪ್‌ಗೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಆಪ್ತರು ತಿಳಿಸಿದ್ದಾರೆ.

ನಾಳೆ(ಏ.2) ಅವರು ಆಸ್ಪತ್ರೆಯಿಂದ ಮನೆಗೆ ತೆರಳಲಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT