ಗುರುವಾರ , ಆಗಸ್ಟ್ 18, 2022
24 °C

ಶೀಘ್ರ ಗುಣಮುಖರಾಗಿ: ಸಂಚಾರಿ ವಿಜಯ್‌ಗೆ ಶಿವರಾಜ್‌ಕುಮಾರ್‌ ಹಾರೈಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೈಕ್‌ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ನಟ ಸಂಚಾರಿ ವಿಜಯ್‌ ಅವರು ಶೀಘ್ರ ಗುಣಮುಖರಾಗಲಿ ಎಂದು ನಟ ಶಿವರಾಜ್‌ಕುಮಾರ್‌ ಹಾರೈಸಿದ್ದಾರೆ. 

‘ಶೀಘ್ರ ಗುಣಮುಖರಾಗಿ. ದೇವರ ಆಶೀರ್ವಾದ ನಿಮ್ಮ ಮೇಲಿರಲಿ’ ಎಂದು ಇನ್‌ಸ್ಟಾಗ್ರಾಂನಲ್ಲಿ ಶಿವರಾಜ್‌ಕುಮಾರ್‌ ಬರೆದಿದ್ದಾರೆ. ಸಂಚಾರಿ ವಿಜಯ್‌ ಅವರ ಜೊತೆಗಿರುವ ಫೋಟೊವನ್ನೂ ಶಿವರಾಜ್‌ಕುಮಾರ್‌ ಅಪ್‌ಲೋಡ್‌ ಮಾಡಿದ್ದಾರೆ.

‘ಜೀವಕ್ಕೆ ಅಪಾಯವಿಲ್ಲ’: ‘ವಿಜಯ್‌ ಅವರ ಎದೆಬಡಿತ, ರಕ್ತದೊತ್ತಡ ಎಲ್ಲವೂ ಸಾಮಾನ್ಯವಾಗಿದೆ. ವೈದ್ಯರು ‘ವಿಜಯ್‌ ಅವರು ಅಪಾಯದಿಂದ ಹೊರಬಂದಿದ್ದಾರೆ’ ಎಂದು ತಿಳಿಸಿದ್ದಾರೆ. ಐಸಿಯು ಒಳಗೆ ನಾನು ಹೋಗಿದ್ದೆ, ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಬೈಕ್‌ ಓಡಿಸುತ್ತಿದ್ದ ನವೀನ್‌ ಅವರಿಗೂ ಅಪಾಯವಿಲ್ಲ. ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಕಳೆದೊಂದು ವಾರದಿಂದ ನಾವಿಬ್ಬರೂ ಜೊತೆಗೇ ಇದ್ದೆವು, ಆಹಾರ ಕಿಟ್‌ಗಳನ್ನು ಹಂಚುತ್ತಿದ್ದೆವು. ‘ಉಸಿರು’ ತಂಡದೊಂದಿಗೆ ಕೋವಿಡ್‌ ಪರಿಹಾರ ಕಾರ್ಯದಲ್ಲಿ ವಿಜಯ್‌ ತೊಡಗಿದ್ದರು’ ಎಂದು ನಟ ನೀನಾಸಂ ಸತೀಶ್‌ ಹೇಳಿದರು.

ನಟ ಶರಣ್‌ ಅವರೂ ‘ವಿಜಯ್‌ ಸರ್‌ ಅವರು ಶೀಘ್ರವಾಗಿ, ಸಂಪೂರ್ಣವಾಗಿ ಗುಣಮುಖರಾಗಿ ಬರಲಿ. ಶೀಘ್ರವೇ ನೀವು ಮತ್ತಷ್ಟು ಚೇತರಿಸಿಕೊಳ್ಳಿ ಎಂದು ಆಶಿಸುತ್ತೇನೆ’ ಎಂದು ಇನ್‌ಸ್ಟಾಗ್ರಾಂನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ.. ನಟ ಸಂಚಾರಿ ವಿಜಯ್‌ಗೆ ಅಪಘಾತ: ಸ್ಥಿತಿ ಗಂಭೀರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು