ಹೊಸಪೇಟೆ (ವಿಜಯನಗರ): ನಟ ಶಿವರಾಜಕುಮಾರ್ ಅವರು ಬುಧವಾರ ಅಭಿಮಾನಿಗಳೊಂದಿಗೆ ನಗರದ ಲಕ್ಷ್ಮಿ ಚಿತ್ರಮಂದಿರದಲ್ಲಿ ಅವರ ನಟನೆಯ ‘ವೇದ’ ಸಿನಿಮಾ ವೀಕ್ಷಿಸಿದರು.

ಅನಂತರ ಅವರು ಚಿತ್ರಮಂದಿರದ ಎದುರು ನಿರ್ಮಿಸಿದ್ದ ಕಿರು ವೇದಿಕೆಯಲ್ಲಿ ಹಾಡು ಹೇಳುತ್ತ ಡಾನ್ಸ್ ಮಾಡಿದಾಗ ಜನರ ಸಂಭ್ರಮ ಮೇರೆ ಮೀರಿತ್ತು. ಕರತಾಡನ ಮುಗಿಲು ಮುಟ್ಟಿತ್ತು. ‘ಅಪ್ಪು’, ‘ಅಪ್ಪು’, ‘ಶಿವಣ್ಣ’, ‘ಶಿವಣ್ಣ’ ಎಂದು ಘೋಷಣೆ ಕೂಗಿದರು. ಹರ್ಷೊದ್ಘಾರ ತೆಗೆದರು. ಚಿಣ್ಣರು, ಯುವಕ/ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು. ಶಿವಣ್ಣ ಅವರೊಂದಿಗೆ ಪತ್ನಿ ಗೀತಾ ಹಾಗೂ ಚಿತ್ರತಂಡದವರು ಇದ್ದರು.

‘ಎಲ್ಲರಿಗೂ ಹೊಸ ವರ್ಷದ ಶುಭಾಶಯಗಳು. ಸಿನಿಮಾ ನೋಡಿದ್ರಾ, ಇಷ್ಟವಾಯ್ತಾ? ಪ್ರೊಡ್ಯೂಸರ್ ಯಾರು? ಎಂದು ಪ್ರಶ್ನಿಸಿ ಉತ್ತರ ಪಡೆದ ಶಿವಣ್ಣ, ನಿಮ್ಮೊಂದಿಗೆ ಸಿನಿಮಾ ನೋಡಿ ಬಹಳ ಖುಷಿಯಾಗಿದೆ. ಇನ್ಮೇಲೆ ಹೊಸಪೇಟೆಗೆ ಪದೇ ಪದೇ ಬರುತ್ತೇನೆ. ಅಪ್ಪುಗೆ ಪ್ರೀತಿ ತೋರಿದ ಊರಿದು ಎಂದು ಹೇಳಿ ಕೈಮುಗಿದು ನಮಸ್ಕರಿಸಿ ಹೊರಟರು. ಶಿವಣ್ಣ ಅವರನ್ನು ಕಣ್ತುಂಬಿಕೊಳ್ಳಲು ಅಪಾರ ಅಭಿಮಾನಿಗಳು ಸೇರಿದ್ದರು. ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.