ಬುಧವಾರ, 7 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂದಲೂರು ಮೃಗಾಲಯದ ಸಿಂಹ, ಆನೆಯನ್ನು ದತ್ತು ತೆಗೆದುಕೊಂಡ ನಟ ಶಿವಕಾರ್ತಿಕೇಯನ್

Last Updated 4 ಸೆಪ್ಟೆಂಬರ್ 2021, 16:22 IST
ಅಕ್ಷರ ಗಾತ್ರ

ಚೆನ್ನೈ: ಪ್ರಾಣಿಗಳ ಮೇಲಿನ ಪ್ರೀತಿಗೆ ಹೆಸರುವಾಸಿಯಾದ ತಮಿಳು ಚಿತ್ರನಟ ಡಿ. ಶಿವಕಾರ್ತಿಕೇಯನ್ ಅವರು 'ವಿಷ್ಣು' ಎಂಬ ಹೆಸರಿನ ಸಿಂಹ ಮತ್ತು 'ಪ್ರಕೃತಿ' ಎಂಬ ಹೆಸರಿನ ಹೆಣ್ಣಾನೆಯನ್ನು ಅರಿಗ್ನಾರ್ ಅನ್ನಾ ಪ್ರಾಣಿ ಸಂಗ್ರಹಾಲಯದಿಂದ ಆರು ತಿಂಗಳ ಅವಧಿಗೆ ದತ್ತು ಪಡೆದಿದ್ದಾರೆ ಎಂದು ಅಧಿಕಾರಿಗಳು ಶನಿವಾರ ಹೇಳಿದರು.

'ಇದು ಸಿಂಹ ಮತ್ತು ಆನೆಯ ಸಂರಕ್ಷಣೆಗಾಗಿ ಅವರ (ನಟನ) ಉತ್ಸಾಹವನ್ನು ತೋರಿಸುತ್ತದೆ. ಸಿಂಹ ಮತ್ತು ಆನೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಅವರು ಅವುಗಳ ಸಂರಕ್ಷಣೆಗಾಗಿ ಕರೆ ನೀಡಿದ್ದಾರೆ' ಎಂದು ಮೃಗಾಲಯವು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

2018 ರಿಂದ 2020ರ ಅವಧಿಯಲ್ಲಿ ‘ಅನು’ ಎಂಬ ಹೆಸರಿನ ಬಿಳಿ ಹುಲಿಯನ್ನು ದತ್ತು ಪಡೆದಿದ್ದರು. ಅವರಿಗೆ ಧನ್ಯವಾದಗಳು. ಎಎಜೆಡ್‌ಪಿ ಆಗ್ನೇಯ ಏಷ್ಯಾದ ಅತಿದೊಡ್ಡ ಮೃಗಾಲಯಗಳಲ್ಲಿ ಒಂದಾಗಿದ್ದು, 2,452 ಪ್ರಾಣಿಗಳನ್ನು ಹೊಂದಿದೆ ಎಂದು ಹೇಳಿದ್ದಾರೆ.

ದತ್ತು ನೀಡುವ ಕಾರ್ಯಕ್ರಮವು ಸಾರ್ವಜನಿಕರಿಗೆ ಪ್ರಾಣಿಗಳೊಂದಿಗೆ ನಿಕಟ ಒಡನಾಟವನ್ನು ಹೊಂದಲು ಅನುಕೂಲ ಮಾಡಿಕೊಡುತ್ತದೆ. 'ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವವರು ತಮ್ಮ ಆಸಕ್ತಿಯ ಪ್ರಾಣಿಗಳ ಆಹಾರ ಮತ್ತು ನಿರ್ವಹಣೆಗಾಗಿ ಹಣವನ್ನು ದಾನ ಮಾಡಬಹುದು. ಆದಾಯ ತೆರಿಗೆ ವಿನಾಯಿತಿ ಹೊರತಾಗಿ, ದಾನಿಗಳು ಮೃಗಾಲಯಕ್ಕೆ ಉಚಿತವಾಗಿ ಭೇಟಿ ನೀಡುವಂತಹ ಇತರ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು' ಎಂದು ಪ್ರಕಟಣೆ ತಿಳಿಸಿದೆ.

ವಾರ್ಷಿಕವಾಗಿ ಸುಮಾರು 20 ಲಕ್ಷ ಜನರನ್ನು ಆಕರ್ಷಿಸುವ ಎಎಪಿಜೆಡ್, ಈ ವರ್ಷ ಏಪ್ರಿಲ್ 20 ರಿಂದ ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಮುಚ್ಚಲ್ಪಟ್ಟಿತ್ತು ಮತ್ತು ಸುರಕ್ಷತಾ ಮುನ್ನೆಚ್ಚರಿಕೆಗಳೊಂದಿಗೆ ಆಗಸ್ಟ್ 25 ರಂದು ಪುನಃ ತೆರೆದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT