ಕಂಗನಾಗೂ ಲೈಂಗಿಕ ಕಿರುಕುಳ ಕೊಟ್ಟಿದ್ರಂತೆ

7
ಬಾಲಿವುಡ್‌

ಕಂಗನಾಗೂ ಲೈಂಗಿಕ ಕಿರುಕುಳ ಕೊಟ್ಟಿದ್ರಂತೆ

Published:
Updated:

‘ವಿಕಾಸ್‌ ಬೆಹ್ಲ್‌, ಸೊಂಟಕ್ಕೆ ಕೈ ಹಾಕಿ ನನ್ನನ್ನು ತಬ್ಬಿಕೊಂಡು, ಕತ್ತಿನಂಚಿಗೆ ವಾಲುತ್ತಿದ್ದರು. ಕೂದಲಿನ ವಾಸನೆ ತೆಗೆದುಕೊಳ್ಳುವಂತೆ ಉಸಿರಾಡುತ್ತಿದ್ದರು. ಆ ಸಾಮೀಪ್ಯ, ಆ ಸಾಂಗತ್ಯ ಸಾಕಷ್ಟು ಕಿರಿಕಿರಿಯುಂಟು ಮಾಡುತ್ತಿತ್ತು. ಪಾರ್ಟಿಗಳಲ್ಲೆಲ್ಲ ಹಿಂದೆಯಿಂದ ತಬ್ಬಿ, ಕತ್ತಿನತ್ತ ತುಟಿ ತರುತ್ತಿದ್ದುದು, ಅವರ ಉಸಿರು ಸೋಕುವಂತೆ ಮಾಡುತ್ತಿದ್ದರು.’

ಹೀಗೆ ಹೇಳುತ್ತಲೇ ಕಂಗನಾ ರನೋಟ್‌ ಬಾಲಿವುಡ್‌ನ #metoo ಗೆ ಚಾಲನೆ ನೀಡಿದ್ದಾರೆ.

ಕ್ವೀನ್‌ ಚಿತ್ರ ಯಶಸ್ವಿಯಾದ ಸಂದರ್ಭದಲ್ಲಿ ಹಲವಾರು ಪಾರ್ಟಿಗಳಲ್ಲಿ ಹೀಗೆ ಅನುಚಿತವಾಗಿ ನಡೆದುಕೊಂಡಿದ್ದಾರೆ. ಆಗೆಲ್ಲ ಇರುಸುಮುರುಸು ಅನುಭವಿಸಿದ್ದಿದೆ. ಬೇಗ ಮಲಗುತ್ತೇನೆಂಬ ಕಾರಣ ನೀಡಿ ಹಲವಾರು ಪಾರ್ಟಿಗಳಿಗೆ ಹೋಗುವುದನ್ನೇ ತಪ್ಪಿಸಿಕೊಂಡಿದ್ದೆ. ಆದರೆ ಆಗೆಲ್ಲ ’ರಾನಿ ಜಲ್ದಿ ಸೋತಿ ಹೈ’ ಎಂದು ಹೀಯಾಳಿಸುತ್ತಿದ್ದರು.

ಕ್ವೀನ್‌ ಚಿತ್ರೀಕರಣದ ಸಂದರ್ಭದಲ್ಲಿಯೂ ಇನ್ನೊಬ್ಬ ಯುವತಿ ವಿಕಾಸ್‌ ವಿರುದ್ಧ ಲೈಂಗಿಕ ದೌರ್ಜನ್ಯ ಹಾಗೂ ದುರ್ಬಳಕೆಯ ಬಗ್ಗೆ ದೂರಿದ್ದರು. ಆಗ ಆ ಯುವತಿಯನ್ನು ಬೆಂಬಲಿಸಿದ್ದೆ. ಕ್ವೀನ್‌ ಚಿತ್ರ ಯಶಸ್ವಿಯಾದ ನಂತರ ಹರಿಯಾಣವೊಂದರಲ್ಲಿ ಚಿನ್ನದ ಪದಕದ ಕಥೆ ಇಟ್ಟುಕೊಂಡು ನನ್ನ ಬಳಿ ಚರ್ಚಿಸುತ್ತಿದ್ದರು. ಆ ಯುವತಿಗೆ ಬೆಂಬಲಿಸಿದ ನಂತರ ಅವರು ಆ ಪ್ರೊಜೆಕ್ಟ್‌ ಬಗ್ಗೆ ನನ್ನ ಬಳಿ ಮಾತನಾಡುವುದನ್ನೇ ಬಿಟ್ಟುಬಿಟ್ಟರು. ಹೀಗೆ ಹಲವಾರು ಪ್ರೊಜೆಕ್ಟ್‌ಗಳನ್ನು ಕಳೆದುಕೊಳ್ಳಬೇಕಾಯಿತು.

ತನುಶ್ರೀ ದತ್ತ ನಾನಾ ಪಾಟೇಕರ್‌ ವಿರುದ್ಧ ಆರೋಪ ಮಾಡಿದ ನಂತರ ಬಾಲಿವುಡ್‌ನಲ್ಲಿಯೂ ಬಿಗಿದ ಬಾಯಿಗಳು ಸಡಿಲಗೊಳ್ಳುತ್ತಿವೆ. ಈ ಹಿಂದೆ ಯಾರನ್ನೂ ಹೆಸರಿಸದೇ ಹಲವು ಕಲಾವಿದೆಯರು ಈ ಬಗ್ಗೆ ಮಾತನಾಡಿದ್ದರು. ಕಂಗನಾ ಮೊದಲ ಸಲ ಹೆಸರು ಹಾಗೂ ಸಂದರ್ಭಗಳನ್ನು ಸ್ಪಷ್ಟಪಡಿಸಿ ಈ ಅಭಿಯಾನಕ್ಕೆ ಮುನ್ನುಡಿ ಬರೆದಿದ್ದಾರೆ. ಇನ್ನು ಯಾರೆಲ್ಲ ಬಾಯ್ಬಿಡುವರೋ, ಯಾರೆಲ್ಲ ಬಯಲಾಗುವರೋ..?

***

‘ಕಂಗನಾಳನ್ನು ನಂಬಲಾಗದು’
ಕಂಗನಾ ರನೋಟ್‌ ವಿಕಾಸ್‌ ಬೆಹ್ಲ್‌ ಬಗ್ಗೆ ಹೇಳಿದ್ದನ್ನು ಕೇಳಿ, ಸೋನಂ ಕಪೂರ್‌ ಕಂಗನಾಳನ್ನು ನಂಬಲಾಗದು ಎಂದು ಹೇಳಿಕೆ ಕೊಟ್ಟಿದ್ದಾರೆ.ಇದಕ್ಕೆ ಕಿಡಿಕಿಡಿಯಾಗಿರುವ ಕಂಗನಾ, ಅತಿ ತೀಕ್ಷ್ಣವಾದ ಪ್ರತಿಕ್ರಿಯೆ ನೀಡಿದ್ದಾರೆ. ‘ನಾನು ಇಲ್ಲಿ ಮಿ ಟೂ ಸ್ಟೋರಿಯನ್ನು ಹಂಚಿಕೊಂಡಿದ್ದೇನೆ. ಅದರ ಬಗ್ಗೆ ತೀರ್ಮಾನಗಳನ್ನು ನೀಡಲು ಸೋನಂ ಯಾರು? ನನ್ನ ಬಗ್ಗೆ ತೀರ್ಪುನೀಡುವ ಅಧಿಕಾರ ಯಾರು ಕೊಟ್ಟರು ಅವಳಿಗೆ? ನಾನಿಲ್ಲಿ ನನ್ನ ಅಪ್ಪನ ಪ್ರಭಾವದಿಂದ ಮುಂದೆ ಬಂದಿಲ್ಲ. ನನ್ನ ಪ್ರಯತ್ನ ಹಾಗೂ ಶ್ರಮದಿಂದಾಗಿ ನಾನಿಲ್ಲಿ ಒಂದು ಮಹತ್ವದ ಸ್ಥಾನವನ್ನು ಪಡೆದುಕೊಂಡಿದ್ದೇನೆ. ಯುವ ಜನಾಂಗ ನನ್ನ ಮಾತುಗಳಿಂದ ಪ್ರಭಾವಿತಗೊಳ್ಳುತ್ತದೆ ಎಂದೇ ಅಲ್ಲಲ್ಲಿ ವೇದಿಕೆಯ ಮೇಲೆ ನನ್ನ ಕಥೆಗಳನ್ನು ಹಂಚಿಕೊಂಡಿದ್ದೇನೆ. ಪ್ರೇರಣೆ ನೀಡಿದ್ದೇನೆ. ಸೋನಂ ಒಳ್ಳೆಯ ಕಲಾವಿದೆಯೂ ಅಲ್ಲ, ನಟಿಯೂ ಅಲ್ಲ, ಮಾತುಗಾರ್ತಿಯೂ ಅಲ್ಲ. ಸಿನಿಮಾ ಹಿನ್ನೆಲೆಯ ಕುಟುಂಬದಿಂದ ಬಂದವರು ನಮ್ಮ ಚಾರಿತ್ರ್ಯದ ಬಗ್ಗೆ ಮಾತನಾಡಲು ಬಂದರೆ ಅವರನ್ನೆಲ್ಲ ಸರ್ವನಾಶ ಮಾಡುತ್ತೇನೆ. ಸೋನಂ ತನ್ನ ಕೆಲಸ ತಾನು ನೋಡಿಕೊಳ್ಳಲಿ’ ಎಂಬ ಸಲಹೆಯನ್ನೂ ಕಂಗನಾ ನೀಡಿದ್ದಾರೆ.

ಬರಹ ಇಷ್ಟವಾಯಿತೆ?

 • 5

  Happy
 • 2

  Amused
 • 0

  Sad
 • 1

  Frustrated
 • 0

  Angry

Comments:

0 comments

Write the first review for this !