ಶುಕ್ರವಾರ, ಜೂನ್ 25, 2021
21 °C

ವಲಸಿಗರಿಗೆ ನೆರವು: ಸೋನು ಸೂದ್‌ ಪುಸ್ತಕ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಲಾಕ್‌ಡೌನ್‌ ಸಂದರ್ಭದಲ್ಲಿ ಸಾವಿರಾರು ಮಂದಿ ವಲಸೆ ಕಾರ್ಮಿಕರನ್ನು ತಮ್ಮ ಊರಿಗೆ ತಲುಪಿಸಲು ನೆರವಾಗುವ ಮೂಲಕ ರಾಷ್ಟ್ರದ ಗಮನ ಸೆಳೆದಿದ್ದ ನಟ ಸೋನು ಸೂದ್‌, ಆ ಸಂದರ್ಭದ ತಮ್ಮ ಅನುಭವಗಳ ಬಗ್ಗೆ ಪುಸ್ತಕ ಬರೆಯಲು ಆರಂಭಿಸಿದ್ದಾರೆ.

ಸಂಕಷ್ಟಕ್ಕೆ ಒಳಗಾದ ಜನರಿಗೆ ನೆರವು ನೀಡಲು ಮುಂದಾದಾಗ ಎದುರಾದ ಸವಾಲುಗಳು, ಮತ್ತು ಭಾವನಾತ್ಮಕ ಸಂದರ್ಭಗಳನ್ನು ಪುಸ್ತಕದಲ್ಲಿ ನಮೂದಿಸುವುದಾಗಿ ಅವರು ಹೇಳಿದ್ದಾರೆ. ಇನ್ನೂ ಹೆಸರಿಡದ ಈ ಪುಸ್ತಕವನ್ನು, ಈ ವರ್ಷಾಂತ್ಯದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಪ್ರಕಾಶನ ಸಂಸ್ಥೆ ‘ಪೆಂಗ್ವಿನ್‌ ರ್‍ಯಾಂಡಂಹೌಸ್‌ ಇಂಡಿಯಾ’ ಬುಧವಾರ ಹೇಳಿದೆ.

‘ಸಂಕಷ್ಟದಲ್ಲಿ ಸಿಲುಕಿರುವ ವಲಸಿಗರಿಗೆ ನೆರವಾಗಲು ನನ್ನನ್ನು ಮಾಧ್ಯಮವಾಗಿ ಬಳಸಿಕೊಂಡಿದ್ದಕ್ಕಾಗಿ ನಾನು ಭಗವಂತನಿಗೆ ಋಣಿಯಾಗಿದ್ದೇನೆ. ನನ್ನ ಹೃದಯಬಡಿತ ಇರುವುದು ಮುಂಬೈಯಲ್ಲಿ. ಆದರೆ ಈ ಘಟನೆಯ ನಂತರ ನನ್ನ ದೇಹದ ಭಾಗಗಳು ಬಿಹಾರ, ಜಾರ್ಖಂಡ್‌, ಅಸ್ಸಾಂ, ಉತ್ತರಾಖಂಡ ಹಾಗೂ ಇತರ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲೂ ಇವೆ ಎಂಬ ಭಾವನೆ ಮೂಡಿದೆ. ವಿವಿಧ ರಾಜ್ಯಗಳಲ್ಲಿ ನನಗೀಗ ಸ್ನೇಹಿತರಿದ್ದಾರೆ. ಅವರ ಜತೆಗೆ ಆಳವಾದ ಸಂಪರ್ಕಗಳನ್ನು ನಾನು ಹೊಂದಿದ್ದೇನೆ. ನನ್ನ ಆಂತರ್ಯದಲ್ಲಿ ಹುದುಗಿರುವ ಈ ಎಲ್ಲಾ ಕತೆಗಳನ್ನು ಪುಸ್ತಕದ ರೂಪದಲ್ಲಿ ಹೊರತರಲು ತೀರ್ಮಾನಿಸಿದ್ದೇನೆ. ನಿಮ್ಮೆಲ್ಲರ ಬೆಂಬಲ ಬೇಕಾಗಿದೆ’ ಎಂದು ಸೋನುಸೂದ್‌ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು