ಶನಿವಾರ, ಆಗಸ್ಟ್ 20, 2022
21 °C

ನಟ ಸುದೀಪ್ ಬಯೊಗ್ರಫಿ ಬಿಡುಗಡೆ ಮಾಡಿದ ಪುನೀತ್ ರಾಜ್‌ಕುಮಾರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನಟ ಸುದೀಪ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಅಂದಹಾಗೆ ಇಂದೇ ಅವರ ಬಯೊಗ್ರಫಿ ಕೂಡ ಬಿಡುಗಡೆಯಾಗಿದೆ. ಈ ಪುಸ್ತಕವನ್ನು ಬಿಡುಗಡೆಗೊಳಿಸಿದ್ದು ಬೇರಾರು ಅಲ್ಲ; ನಟ ಪುನೀತ್ ರಾಜ್‌ಕುಮಾರ್. ಪತ್ರಕರ್ತ ಶರಣು ಹುಲ್ಲೂರು ಈ ಪುಸ್ತಕ ಬರೆದಿದ್ದಾರೆ.

ಪುಸ್ತಕ ಬಿಡುಡಗೆಗೊಳಿಸಿದ ಪುನೀತ್‌ ಅವರು, ಸುದೀಪ್‌ಗೆ ಹುಟ್ಟುಹಬ್ಬದ ಶುಭ ಕೋರಿದರು. ‘ಈ ಪುಸ್ತಕ ಸಮಗ್ರ ಮಾಹಿತಿ ಒಳಗೊಂಡಿದೆ. ಜೊತೆಗೆ, ಅಪರೂಪದ ಫೋಟೊಗಳಿದ್ದು, ಓದುಗರ ಮನ ಸೆಳೆಯಲಿದೆ’ ಎಂದು ಹೇಳಿದರು.

ಪುಸ್ತಕದಲ್ಲಿ ಸುದೀಪ್ ಮತ್ತು ಪುನೀತ್ ಅವರ ಬಾಲ್ಯದ ಅಪರೂಪದ ಫೋಟೊ ಕೂಡ ಇದೆ. ಅದನ್ನು ನೋಡಿ ಅವರು ಸಂತಸಪಟ್ಟರು. ಬಾಲ್ಯದ ನೆನಪುಗಳಿಗೆ ಜಾರಿದರು.

ಪುಸ್ತಕದ ಬಿಡುಗಡೆ ವೇಳೆ ವಿಷ್ಣುಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್, ನಿರ್ಮಾಪಕ ಜಾಕ್ ಮಂಜು ಹಾಜರಿದ್ದರು.

ಪುಸ್ತಕದಲ್ಲಿ ಏನಿದೆ?

ಸುದೀಪ್‌ ಅವರ ಬಾಲ್ಯದ ಜೀವನ ಸೇರಿದಂತೆ ಈವರೆಗಿನ ಹಲವು ಸಂಗತಿಗಳು ಪುಸ್ತಕದಲ್ಲಿವೆ. ಚಿತ್ರರಂಗದ ಹಲವು ಘಟನೆಗಳ ಮೇಲೆ ಪುಸ್ತಕ ಬೆಳಕು ಚೆಲ್ಲಿದೆ. ಸುದೀಪ್ ಅವರ ಸಮಗ್ರ ಮಾಹಿತಿ ಒಳಗೊಂಡಿರುವ ಪುಸ್ತಕ ಇದಾಗಿದೆ. ಸುದೀಪ್ ಅವರ ತಂದೆ, ತಾಯಿ, ಅಕ್ಕಂದಿರು, ಪತ್ನಿ ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸುದೀಪ್ ಅವರ ಪುತ್ರಿ ತನ್ನ ಅಪ್ಪನಿಗಾಗಿ ಬರೆದ ಪತ್ರವೂ ಇದೆ. ಅಂದಹಾಗೆ ಇದು ಕಿಚ್ಚನ ಕುರಿತಾಗಿ ಬರುತ್ತಿರುವ ಮೊದಲ ಪುಸ್ತಕವೂ ಹೌದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು