ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಹುಷಾರ್’ ಹಾಡಿಗೆ ಧ್ವನಿಯಾದ ಉಪೇಂದ್ರ

Last Updated 13 ನವೆಂಬರ್ 2022, 12:54 IST
ಅಕ್ಷರ ಗಾತ್ರ

ಸತೀಶ್ ರಾಜ್ ನಿರ್ಮಿಸಿ, ನಿರ್ದೇಶಿಸಿರುವ ‘ಹುಷಾರ್’ ಚಿತ್ರದ ‘ನೀ ನೋಡೋಕ್ಕೆ ಸಿಕ್ಸ್ಟೀನು ಸ್ವೀಟಿ’ ಎಂಬ ಹಾಡನ್ನು ರಿಯಲ್ ಸ್ಟಾರ್ ಉಪೇಂದ್ರ ಹಾಡಿದ್ದಾರೆ. ಇತ್ತೀಚೆಗೆ ಈ ಹಾಡನ್ನು ಪ್ರಿಯಾಂಕಾ ಉಪೇಂದ್ರ ಬಿಡುಗಡೆ ಮಾಡಿದರು. ಚಿತ್ರದ ಟ್ರೇಲರ್ ನಿರ್ಮಾಪಕ ಎನ್.ಎಂ.ಸುರೇಶ್ ಅವರಿಂದ ಬಿಡುಗಡೆಯಾಯಿತು.

ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಉಪೇಂದ್ರ ಅವರು ಹಾಡಿರುವುದು. ಈ ಹಾಡು ಎಚ್‌2ಒ ಚಿತ್ರದ ‘ದಿಲ್ ಇಲ್ದೇ ಲವ್ ಮಾಡೋಕಾಗಲ್ವೆ’ ಹಾಡಿನ ತರಹ ಇದೆ. ಈ ಹಾಡು ಅದೇ ರೀತಿ ಹಿಟ್ ಆಗಲಿ. ಹಾರರ್ ಜಾನರ್ ನ ಈ ಸಿನಿಮಾ ಎಲ್ಲರ ಮನ ಗೆಲ್ಲಲಿ ಎಂದು ಪ್ರಿಯಾಂಕಾ ಉಪೇಂದ್ರ ಶುಭ ಹಾರೈಸಿದರು. ‌

‘ನಾನು ಕನ್ನಡ ಚಿತ್ರರಂಗದ ವಿವಿಧ ವಿಭಾಗದಲ್ಲಿ ಕೆಲಸ ಮಾಡಿದ್ದೇನೆ. ರಂಗಭೂಮಿ ನಂಟು ಇದೆ. ಲಾಕ್ ಡೌನ್ ಸಮಯದಲ್ಲಿ ‘ಹುಷಾರ್’ ಪೆನ್ ಡ್ರೈವ್ ಎಂಬ ಕಥೆ ಬರೆದೆ. ಈ ಕಥೆ ಪುಸ್ತಕ ರೂಪದಲ್ಲಿ ಎಲ್ಲೆಡೆ ಲಭ್ಯವಿವೆ. ಆನಂತರ ಇದನ್ನು ಸಿನಿಮಾ‌ ಮಾಡೋಣ ಎಂದು ಚಿತ್ರೀಕರಣ ಆರಂಭಿಸಿದೆ. ಹಲವು ಅಡೆತಡೆಗಳನ್ನು ದಾಟಿ, ಚಿತ್ರ ಬಿಡುಗಡೆ ಹಂತ ತಲುಪಿದೆ. ಉಪೇಂದ್ರ ಅವರು ನಮ್ಮ ಸಿನಿಮಾದ ಹಾಡೊಂದು ಹಾಡಿರುವುದು ನಮ್ಮ ಹೆಮ್ಮೆ. ಆ ಹಾಡನ್ನು ಬಿಡುಗಡೆ ಮಾಡಿದ ಪ್ರಿಯಾಂಕಾ ಉಪೇಂದ್ರ ಅವರಿಗೆ ಧನ್ಯವಾದ’ ಎಂದರು ನಿರ್ಮಾಪಕ- ನಿರ್ದೇಶಕ ಸತೀಶ್ ರಾಜ್. ‌

ನಾಯಕ ಸಿದ್ದೇಶ್, ನಾಯಕಿ ಆದ್ಯಪ್ರಿಯ, ನಟಿ ಪುಷ್ಪಸ್ವಾಮಿ, ನಟರಾದ ಬುಲೆಟ್ ವಿನೋದ್, ಡಿಂಗ್ರಿ ನಾಗರಾಜ್, ನಟಿ ರಚನಾ ಮಲ್ನಾಡ್‌ ಚಿತ್ರದ ತಾರಾಗಣದಲ್ಲಿದ್ದಾರೆ. ಸಹ ನಿರ್ಮಾಪಕಿ ಅಶ್ವಿನಿ,ಆರ್ಥಿಕ ಸಲಹೆಗಾರರಾದ ಇಂದು ಶೇಖರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT