ಗುರುವಾರ , ಫೆಬ್ರವರಿ 25, 2021
28 °C

ನತಾಶಾ ದಲಾಲ್ ಕೈಹಿಡಿದ ಬಾಲಿವುಡ್ ನಟ ವರುಣ್ ಧವನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಬಾಲಿವುಡ್ ನಟ ವರುಣ್ ಧವನ್ ಅವರು ಫ್ಯಾಶನ್ ಡಿಸೈನರ್ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದಾರೆ.

ಭಾನುವಾರ ಸಂಜೆ ಅಲಿಬಾಗ್‌ನ ಐಷಾರಾಮಿ ರೆಸಾರ್ಟ್ ‘ದಿ ಮ್ಯಾನ್ಷನ್ ಹೌಸ್‌’ನಲ್ಲಿ ಕುಟುಂಬ ಮತ್ತು ಆಪ್ತರ ಸಮ್ಮುಖದಲ್ಲಿ ವಿವಾಹ ನಡೆದಿದೆ.

33 ವರ್ಷದ ನಟ ವರುಣ್ ಧವನ್ ಇನ್‌ಸ್ಟಾಗ್ರಾಮ್‌ನಲ್ಲಿ ವಿವಾಹದ ಫೊಟೊವನ್ನು ಹಂಚಿಕೊಂಡಿದ್ದಾರೆ. "ಲೈಫ್ ಲಾಂಗ್ ಲವ್ ಇದೀಗ ಅಧಿಕೃತವಾಯಿತು," ಎಂದು ಚಿತ್ರಗಳಿಗೆ ಶೀರ್ಷಿಕೆ ನೀಡಿದ್ದಾರೆ.

ನವದಂಪತಿ ಮದುವೆಯಲ್ಲಿ ಭಾರತೀಯ ಉಡುಪುಗಳನ್ನು ತೊಟ್ಟಿದ್ದರು. ದಲಾಲ್, ಲೆಹೆಂಗಾ ಧರಿಸಿ ಸರಳ ಮೇಕಪ್ ಮತ್ತು ಕನಿಷ್ಠ ಆಭರಣ ತೊಟ್ಟಿದ್ದರೆ, ಧವನ್ ಬೆಳ್ಳಿ-ನೀಲಿ ಬಣ್ಣದ ಶೆರ್ವಾನಿ ತೊಟ್ಟು ಕಂಗೊಳಿಸುತ್ತಿದ್ದರು. ಮದುವೆ ಬಳಿಕ ನವದಂಪತಿ ಮಾಧ್ಯಮ ಕ್ಯಾಮೆರಾಗಳಿಗೆ ಪೋಸ್ ಕೊಟ್ಟಿದ್ದಾರೆ.

ಈ ಹಿಂದೆ ತಿಳಿಸಿದಂತೆ ಹಿಂದೂ ಸಂಪ್ರದಾಯದ ಮೂಲಕವೇ ವಿವಾಹ ನಡೆದಿದೆ.

ಮೇ 2020 ರಲ್ಲಿ ಧವನ್, ದಲಾಲ್ ಕೈಹಿಡಿಯಲು ನಿಶ್ಚಯಿಸಿದ್ದರು ಆದರೆ, ಕೋವಿಡ್ -19ನಿಂದಾಗಿ ಮದುವೆಯನ್ನು 2021 ಕ್ಕೆ ಮುಂದೂಡಲಾಗಿತ್ತು.

ವರದಿಗಳ ಪ್ರಕಾರ, ಆಪ್ತ ಉದ್ಯಮದ ಸ್ನೇಹಿತರಾದ ಕರಣ್ ಜೋಹರ್, ಶಶಾಂಕ್ ಖೈತಾನ್ ಮತ್ತು ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಸೇರಿದಂತೆ ಸುಮಾರು 50 ಜನರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು.

ನಟ ವರುಣ್ ಧವನ್ ಅಲಿಬಾಗ್‌ನ ಸಾಸ್ವಾನ್‌ನ ವಿವಾಹದ ಸ್ಥಳಕ್ಕೆ ಶನಿವಾರ ತೆರಳಿದ್ದರು. ತಂದೆ, ಚಲನಚಿತ್ರ ನಿರ್ಮಾಪಕ ಡೇವಿಡ್ ಧವನ್, ತಾಯಿ ಲಾಲಿ, ಸಹೋದರ ರೋಹಿತ್ ಮತ್ತು ಚಿಕ್ಕಪ್ಪ, ಹಿರಿಯ ನಟ ಅನಿಲ್ ಧವನ್ ಸೇರಿದಂತೆ ಕುಟುಂಬದ ಇತರೆ ಸದಸ್ಯರು ಶುಕ್ರವಾರವೇ ತೆರಳಿ ಸಂಭ್ರಮಕ್ಕೆ ಸಜ್ಜಾಗಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು