ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಟ ವರುಣ್ ಧವನ್ ಅಭಿನಯದ 'ಬೇಬಿ ಜಾನ್‌' ಚಿತ್ರ ಇದೇ ಮೇ 31ಕ್ಕೆ ತೆರೆಗೆ

Published 5 ಫೆಬ್ರುವರಿ 2024, 12:43 IST
Last Updated 5 ಫೆಬ್ರುವರಿ 2024, 12:43 IST
ಅಕ್ಷರ ಗಾತ್ರ

ನವದೆಹಲಿ: ಬಾಲಿವುಡ್‌ ನಟ ವರುಣ್ ಧವನ್ ಅಭಿನಯದ ಚಿತ್ರ ‘ಬೇಬಿ ಜಾನ್‌’ ಇದೇ ಮೇ 31ಕ್ಕೆ ವಿಶ್ವದಾದ್ಯಂತ ತೆರೆಗೆ ಅಪ್ಪಳಿಸಲಿದೆ ಎಂದು ಚಿತ್ರತಂಡ ಹೇಳಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ನಟ ವರುಣ್ ಧವನ್‌ ಪೋಸ್ಟ್‌ ಹಂಚಿಕೊಂಡು ಮಾಹಿತಿ ನೀಡಿದ್ದಾರೆ.

‘ಜವಾನ್‌‘ ಸಿನಿಮಾ ಖ್ಯಾತಿಯ ನಿರ್ದೇಶಕ ಅಟ್ಲಿ ಅವರ ನಿರ್ಮಾಣ ಸಂಸ್ಥೆಯ ಬ್ಯಾನರ್ ಅಡಿ ಈ ಚಿತ್ರ ನಿರ್ಮಾಣವಾಗಿದೆ.

‘ಬೇಬಿ ಜಾನ್‌’ ಚಿತ್ರದಲ್ಲಿ ನಟಿ ಕೀರ್ತಿ ಸುರೇಶ್ ಹಾಗೂ ವಾಮಿಕಾ ಗಬ್ಬಿ ನಟಿಸಿದ್ದಾರೆ. ಜಾಕಿ ಶ್ರಾಫ್ ಹಾಗೂ ರಾಜ್‌ಪಾಲ್‌ ಯಾದವ್‌ ಸಹ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ಕಾಲೀಸ್ ಆ್ಯಕ್ಷನ್‌ ಕಟ್‌ ಹೇಳಿದ್ದಾರೆ.

ಸಿನಿ1 ಸ್ಟುಡಿಯೋಸ್ ಹಾಗೂ ಜಿಯೋ ಸ್ಟುಡಿಯೋಸ್‌ ಬ್ಯಾನರ್‌ಗಳೂ ಸಹ ‘ಬೇಬಿ ಜಾನ್‌’ ಚಿತ್ರ ನಿರ್ಮಾಣ ಕಾರ್ಯದಲ್ಲಿ ಕೈ ಜೋಡಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT