ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣವೀರ್ ಸಿಂಗ್‌ ಪ್ರೇರಣೆ: ಪತ್ನಿಯಿಂದ ಬೆತ್ತಲೆ ಫೋಟೊಶೂಟ್ ಮಾಡಿಸಿದ ತಮಿಳು ನಟ

ಅಕ್ಷರ ಗಾತ್ರ

ಬೆಂಗಳೂರು: ಬಾಲಿವುಡ್ನಟ ರಣವೀರ್ ಸಿಂಗ್ ಇತ್ತೀಚೆಗೆ ಮ್ಯಾಗ್‌ಜಿನ್ ಒಂದರ ಫೋಟೊಶೂಟ್‌ಗೆ ಬೆತ್ತಲೆಯಾಗಿ ಕಾಣಿಸಿಕೊಂಡು ಸುದ್ದಿಯಾಗಿದ್ದರು. ತಮ್ಮ ಆಕರ್ಷಕ ಮೈಮಾಟದ ಫೋಟೊಗಳೊಂದಿಗೆ ರಣವೀರ್ ಯುವತಿಯರ ಎದೆಯಲ್ಲಿ ಕಚಗುಳಿ ಇಟ್ಟಿದ್ದರು.

ಇದೀಗ ತಮಿಳು ನಟ ವಿಷ್ಣು ವಿಶಾಲ್ ಕೂಡ ರಣವೀರ್ ಅವರಿಂದ ಪ್ರಭಾವಿತರಾಗಿ ಬೆತ್ತಲೆ ಫೋಟೊಶೂಟ್ ಮಾಡಿಸಿದ್ದಾರೆ. ರಾಕ್ಷತನ್ ಖ್ಯಾತಿಯ ವಿಷ್ಣು ವಿಶಾಲ್ ಕೂಡ ಫೋಟೊಶೂಟ್‌ನಲ್ಲಿ ತಮ್ಮ ಆಕರ್ಷಕ ಮೈಮಾಟವನ್ನು ಪ್ರದರ್ಶಿಸಿ ವೈರಲ್ ಆಗಿದ್ದಾರೆ.

‘ನಾನೂ ಕೂಡ್ ಟ್ರೆಂಡ್‌ಗೆ ಜಾಯಿನ್ ಆಗುತ್ತಿದ್ದೇನೆ’ ಎಂದು ರಣವೀರ್‌ ಸಿಂಗ್ ಅವರನ್ನು ಸ್ಮರಿಸಿಕೊಂಡಿದ್ದಾರೆ. ವಿಶೇಷವೆಂದರೆ ವಿಷ್ಣು ಅವರ ಪತ್ನಿ ಜ್ವಾಲಾ ಗುಟ್ಟಾ ಅವರೇ ಈ ಫೋಟೊ ಶೂಟ್ ಮಾಡಿದ್ದಾರೆ.

ತಮ್ಮ ಆಕರ್ಷಕ ಫೋಟೊಗಳನ್ನು ಸೆರೆಹಿಡಿದಿರುವ ಪತ್ನಿಗೆ ಅವರು ಥ್ಯಾಂಕ್ಸ್ ಹೇಳಿದ್ದಾರೆ. ಬ್ಯಾಡ್ಮಿಂಟನ್ ತಾರೆ ಜ್ವಾಲಾ ಗುಟ್ಟಾ ಹಾಗೂ ವಿಷ್ಣು ಅವರು 2021ರ ಏಪ್ರಿಲ್‌ನಲ್ಲಿ ಹೈದರಾಬಾದ್‌ನಲ್ಲಿ ಮದುವೆ ಆಗಿದ್ದರು.

ಇನ್ನು ಖ್ಯಾತ ನಟರು ಬೆತ್ತಲೆಯಾಗಿ ಫೋಟೊಶೂಟ್ ಮಾಡಿಸುತ್ತಿರುವುದು ಚಿತ್ರರಂಗದಲ್ಲಿ ಪರ– ವಿರೋಧದ ಚರ್ಚೆಯನ್ನು ಹಟ್ಟುಹಾಕುತ್ತಿದೆ. ಊರ್ಫಿ ಜಾವೇದ್ ಕೂಡ ರಣವೀರ್ ಅವರಿಂದ ಸ್ಪೂರ್ತಿ ಆಗಿ ಮಾದಕ ವಿಡಿಯೊ ಹರಿಬಿಟ್ಟಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT