ಸೋಮವಾರ, ಜನವರಿ 24, 2022
29 °C

ಇಶಾ ಗುಪ್ತಾ ಅವರಿಗೆ ಕೋವಿಡ್, ಮಾಸ್ಕ್ ಧರಿಸುವುದನ್ನು ಮರೆಯದಿರಿ ಎಂದ ನಟಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ನವದೆಹಲಿ: ನಟಿ ಇಶಾ ಗುಪ್ತಾ ಅವರಿಗೆ ಭಾನುವಾರ ಕೋವಿಡ್-19 ದೃಢಪಟ್ಟಿದ್ದು, ಈ ಕುರಿತು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ನೀಡಿದ್ದಾರೆ.

'ಹೆಚ್ಚಿನ ಮುನ್ನೆಚ್ಚರಿಕೆ ತೆಗೆದುಕೊಂಡ ಹೊರತಾಗಿಯೂ, ನನಗೆ ಕೋವಿಡ್-19 ಪಾಸಿಟಿವ್ ಆಗಿದೆ. ನಾನು ನಿಯಮಾವಳಿಗಳನ್ನು ಅನುಸರಿಸುತ್ತಿದ್ದೇನೆ ಮತ್ತು ನನ್ನನ್ನು ನಾನು ಪ್ರತ್ಯೇಕಿಸಿಕೊಂಡು ಸದ್ಯ ಹೋಂ ಕ್ವಾರಂಟೈನ್‌ನಲ್ಲಿದ್ದೇನೆ. ಎಲ್ಲರೂ ಸುರಕ್ಷಿತವಾಗಿರಿ' ಎಂದಿದ್ದಾರೆ.

ಮುಂದುವರಿಸಿದು, 'ನಾನು ಇದರಿಂದ ಬಲಶಾಲಿಯಾಗಿ ಮತ್ತು ಕ್ಷೇಮವಾಗಿ ಹಿಂತಿರುಗುತ್ತೇನೆ ಎಂಬುದು ನನಗೆ ಖಾತ್ರಿಯಿದೆ. ದಯವಿಟ್ಟು ಸುರಕ್ಷಿತವಾಗಿರಿ ಮತ್ತು ಮಾಸ್ಕ್ ಧರಿಸಿ! ನಿಮ್ಮ ಮತ್ತು ಇತರರನ್ನು ಕಾಳಜಿಯಿಂದ ನೋಡಿಕೊಳ್ಳಿ. ಮಾಸ್ಕ್‌ ಧರಿಸುವುದನ್ನು ಮರೆಯಬೇಡಿ. ನಾನು ನಿಮ್ಮೆಲ್ಲರನ್ನೂ ಪ್ರೀತಿಸುತ್ತೇನೆ' ಎಂದು ಬರೆದಿದ್ದಾರೆ.

ಇಶಾ ಅವರು ಜನ್ನತ್ 2, ರುಸ್ತಂ ಮತ್ತು ಬಾದ್‌ಶಾಹೋ ಮುಂತಾದ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಕೊನೆಯದಾಗಿ ನಕಾಬ್ ಎಂಬ ವೆಬ್ ಸರಣಿಯಲ್ಲಿ ಕಾಣಿಸಿಕೊಂಡಿದ್ದರು. ಮುಂದೆ ಸುನೀಲ್ ಶೆಟ್ಟಿ ಎದುರು ಇನ್ವಿಸಿಬಲ್ ವುಮನ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು