ಸೋಮವಾರ, ಸೆಪ್ಟೆಂಬರ್ 27, 2021
21 °C

ಹಬ್ಬಕ್ಕೆ ಸೀರೆಯುಟ್ಟು ಮಿಂಚಿದ ನಟಿ ಹರಿಪ್ರಿಯಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹರಿಪ್ರಿಯಾ, ಚಂದನವನದಲ್ಲಿ ಪ್ರಸ್ತುತ ಅತ್ಯಂತ ಬೇಡಿಕೆಯ ನಟಿಯರಲ್ಲಿ ಒಬ್ಬರು. ಸದ್ಯಕ್ಕೆ ನಟ ಉಪೇಂದ್ರ ಅವರ ‘ಲಗಾಮ್‌’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವ ಹರಿಪ್ರಿಯಾ ಹಬ್ಬಕ್ಕೆ ಸೀರೆಯುಟ್ಟು ಹೊಸ ಫೋಟೊಶೂಟ್‌ ನಡೆಸಿದ್ದಾರೆ.

ಇದನ್ನು ಸೋಮವಾರ ತಮ್ಮ ಟ್ವಿಟರ್‌ ಖಾತೆಯಲ್ಲಿ ಹರಿಪ್ರಿಯಾ ಅಪ್‌ಲೋಡ್‌ ಮಾಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ. ಹರಿಪ್ರಿಯಾ ನಟನೆಯ ಸಾಲು ಸಾಲು ಚಿತ್ರಗಳು ಬಿಡುಗಡೆಗೆ ಸಜ್ಜಾಗಿದ್ದು, ನೀನಾಸಂ ಸತೀಶ್‌ ನಾಯಕರಾಗಿ ನಟಿಸುತ್ತಿರುವ, ವಿಜಯ್‌ ಪ್ರಸಾದ್‌ ನಿರ್ದೇಶನದ ‘ಪೆಟ್ರೋಮ್ಯಾಕ್ಸ್‌’ ಇದರಲ್ಲಿ ಮೊದಲನೆಯದಾಗಿರಲಿದೆ. ಜೊತೆಗೆ ತೆಲುಗಿನಲ್ಲಿ ಸೂಪರ್‌ಹಿಟ್‌ ಆದ ಕ್ರೈಮ್‌ ಥ್ರಿಲ್ಲರ್‌ ‘ಎವರು’ ರಿಮೇಕ್‌, ರಿಷಬ್‌ ಶೆಟ್ಟಿ ಅವರ ‘ಬೆಲ್‌ಬಾಟಂ–2’ ಚಿತ್ರದ ಚಿತ್ರೀಕರಣದಲ್ಲೂ ಹರಿಪ್ರಿಯಾ ತೊಡಗಿಸಿಕೊಂಡಿದ್ದಾರೆ. 

ನಿರ್ದೇಶಕ ಬರಗೂರು ರಾಮಚಂದ್ರಪ್ಪ ನಿರ್ದೇಶನದ ಕಸ್ತೂರ್‌ಬಾ ಗಾಂಧಿಯವರ ಜೀವನದ ಮುಖ್ಯ ಘಟನೆಗಳನ್ನು ಆಧರಿಸಿದ ‘ತಾಯಿ ಕಸ್ತೂರ್‌ ಗಾಂಧಿ’ ಚಲನಚಿತ್ರದಲ್ಲಿ ಕಸ್ತೂರ್‌ಬಾ ಪಾತ್ರದಲ್ಲಿ ಹರಿಪ್ರಿಯಾ ಕಾಣಿಸಿಕೊಳ್ಳಲಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು