ಬುಧವಾರ, ಜನವರಿ 29, 2020
30 °C

ರಜನಿಕಾಂತ್‌ ಚಿತ್ರದಲ್ಲಿ ನಟಿ ಮೀನಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಜನಿಕಾಂತ್‌ - ನಟಿ ಮೀನಾ

ಸಿ ರುತೈ ಶಿವ ನಿರ್ದೇಶನದ, ರಜನಿಕಾಂತ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ತಲೈವಾ 168’ ಚಿತ್ರದಲ್ಲಿ ನಟಿ ಮೀನಾ ನಟಿಸಲಿದ್ದಾರೆ. ಸುಮಾರು ವರ್ಷಗಳ ಬಳಿಕ ಅವರು ರಜನಿಕಾಂತ್‌ ಜೊತೆ ತೆರೆ ಹಂಚಿಕೊಳ್ಳುತ್ತಿರುವುದು ವಿಶೇಷ.

ಈ ಹೊಸ ಚಿತ್ರದ ತಯಾರಿಯಲ್ಲಿ ರಜನಿಕಾಂತ್‌ ತೊಡಗಿಸಿಕೊಂಡಿದ್ದಾರೆ. ಈ ಚಿತ್ರವನ್ನು ಸನ್‌ ಪಿಕ್ಚರ್ಸ್‌ ನಿರ್ಮಾಣ ಮಾಡುತ್ತಿದ್ದು, ಈ ಚಿತ್ರಕ್ಕೆ ಇನ್ನೂ ಟೈಟಲ್‌ ಅಂತಿಮಗೊಂಡಿಲ್ಲ.

ಸದ್ಯ ರಜನಿಕಾಂತ್‌ ಅವರು ಎ.ಆರ್‌. ಮುರುಗದಾಸ್‌ ಅವರ ‘ದರ್ಬಾರ್‌’ ಚಿತ್ರದ ಬಿಡುಗಡೆಗೆ ಕಾಯುತ್ತಿದ್ದು, ಸಿರುತೈ ಶಿವ ಅವರು ಹೊಸ ಚಿತ್ರದ ಚಿತ್ರೀಕರಣಕ್ಕೆ ತಯಾರಿ ನಡೆಸುತ್ತಿದ್ದಾರೆ. ಈ ಚಿತ್ರದಲ್ಲಿ ನಟಿಸುವಂತೆ ಚಿತ್ರತಂಡ, ಹಿರಿಯ ನಟಿ ಮೀನಾ ಅವರನ್ನು ಭೇಟಿಯಾಗಿ ಮಾತುಕತೆಯನ್ನು ಈಗಾಗಲೇ ನಡೆಸಿದೆ.

ಈ ಚಿತ್ರದಲ್ಲಿ ಮೀನಾ ಅವರು ನಟಿಸುತ್ತಿರುವುದನ್ನು ಸ್ಪಷ್ಟಪಡಿಸಿರುವ ಚಿತ್ರತಂಡ, ಪಾತ್ರದ ಬಗ್ಗೆ ಯಾವುದೇ ಸುಳಿವು ಬಿಟ್ಟುಕೊಟ್ಟಿಲ್ಲ. ಇದೇ ಚಿತ್ರದಲ್ಲಿ ಕೀರ್ತಿ ಸುರೇಶ್‌ ಹಾಗೂ ಖುಷ್ಬೂ ಸಹ ಪ್ರಮುಖ ಪಾತ್ರಗಳಿಗೆ ಬಣ್ಣಹಚ್ಚಲಿದ್ದಾರೆ ಎಂಬ ಸುದ್ದಿ ಇದೆ. ಕೀರ್ತಿ ಸುರೇಶ್‌ ಅವರು ರಜನಿಕಾಂತ್‌ ಮಗಳಾಗಿ ಹಾಗೂ ಖುಷ್ಬೂ ಅವರು ಪತ್ನಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಹಾಸ್ಯ ನಟ ಸೂರಿ ಕೂಡ ಈ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಚಿತ್ರ ನಿರ್ಮಾಣ ಮಾಡುತ್ತಿರುವ ಸನ್‌ ಪಿಕ್ಚರ್ಸ್‌ ಹೇಳಿಕೊಂಡಿದೆ.

ಈ ಚಿತ್ರದ ಚಿತ್ರೀಕರಣವು ಡಿಸೆಂಬರ್‌ ಎರಡನೇ  ವಾರದಲ್ಲಿ ಆರಂಭವಾಗಲಿದೆ.  ಈ ಚಿತ್ರಕ್ಕೆ ಡಿ. ಇಮ್ಮನ್ ಅವರು ಸಂಗೀತ ನಿರ್ದೇಶನ ಮಾಡಲಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು