ಮಂಗಳವಾರ, 30 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂದನವನದ ಚೆಲುವೆ ರಚಿತಾ ರಾಮ್, ಯುವ ನಟ ಅಭಿಷೇಕ್ ಅಂಬರೀಷ್‌ಗೆ ಜನ್ಮದಿನದ ಸಂಭ್ರಮ

Last Updated 3 ಅಕ್ಟೋಬರ್ 2021, 9:02 IST
ಅಕ್ಷರ ಗಾತ್ರ

ಬೆಂಗಳೂರು: ಚಂದನವನದ ನಟಿ, ‘ಗುಳಿ ಕೆನ್ನೆ ಚೆಲುವೆ’ ರಚಿತಾ ರಾಮ್ ಹಾಗೂ ಯುವ ನಟ ಅಭಿಷೇಕ್ ಅಂಬರೀಷ್ ಅವರಿಗೆ ಇಂದು (ಅ.3) ಜನ್ಮದಿನದ ಸಂಭ್ರಮ.

ಈ ಇಬ್ಬರಿಗೂ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದು, ಟ್ವಿಟರ್‌ನಲ್ಲಿ ರಚಿತಾ ರಾಮ್ ಕೆಲ ಹೊತ್ತು ಟ್ರೆಂಡ್ ಆಗಿದ್ದರು.ಕೊರೊನಾ ಹಿನ್ನೆಲೆಯಲ್ಲಿ ಅಭಿಷೇಕ್ ಅವರು ಸರಳವಾಗಿ ಹಾಗು ರಚಿತಾ ರಾಮ್ ಕೂಡ ಮನೆಯಲ್ಲೇ ಸರಳವಾಗಿ ಜನ್ಮದಿನ ಆಚರಿಸಿಕೊಂಡಿದ್ದಾರೆ.

ಅಭಿಷೇಕ್ ಅಂಬರೀಷ್ ತಾಯಿ, ಸಂಸದೆ ಸುಮಲತಾ ಅಂಬರೀಷ್ ಅವರು ಪುತ್ರನ ಜನ್ಮದಿನಕ್ಕೆ ಶುಭಾಶಯ ಕೋರಿವಿಶೇಷ ‘ಕಾಮನ್ ಡಿಪಿ‘ ಬಿಡುಗಡೆ ಮಾಡಿದ್ದು ಅದರಲ್ಲಿ ದಿವಂಗತ ಅಂಬರೀಷ್ ಹಾಗೂ ಅಭಿಷೇಕ್ ಅವರ ವಿಶೇಷ ಫೋಟೊವನ್ನು ಅನಾವರಣಗೊಳಿಸಲಾಗಿದೆ.

28 ವರ್ಷದ ಯುವ ನಟ ಅಭಿಷೇಕ್ ಅವರು ಅಕ್ಟೋಬರ್ 3, 1993 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ‘ಅಮರ್‘ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪಾದಾರ್ಪಣೆ ಮಾಡಿದ್ದ ಅವರು, ಸದ್ಯ ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್‘ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

29 ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಚಿತಾ ರಾಮ್ ಅ. 3, 1992 ರಂದು ಬೆಂಗಳೂರಿನಲ್ಲಿ ಜನಿಸಿದ್ದಾರೆ. ಮೊದಲು ಕಿರುತೆರೆಯಲ್ಲಿ ಗುರುತಿಸಿಕೊಂಡಿದ್ದ ರಚಿತಾ, 2013 ರಲ್ಲಿ ದರ್ಶನ್ ಅಭಿನಯದ ‘ಬುಲ್ ಬುಲ್‘ ಸಿನಿಮಾದಲ್ಲಿ ನಟಿಸುವ ಮೂಲಕ ಚಂದನವನದ ಗಮನ ಸೆಳೆದಿದ್ದರು. ಸುಮಾರು 30 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ರಚಿತಾ, ಅವರ 17 ಸಿನಿಮಾಗಳು ಬಿಡುಗಡೆಯಾಗಬೇಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT