ಭಾನುವಾರ, ಆಗಸ್ಟ್ 14, 2022
20 °C

ಡೈರೆಕ್ಟರ್‌ ಟೋಪಿ ಧರಿಸಿದ ಸುಹಾಸಿನಿ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

actress Suhasini Maniratnam

25 ವರ್ಷಗಳ ನಂತರ ನಟಿ ಸುಹಾಸಿನಿ ನಿರ್ದೇಶಕಿಯ ಟೋಪಿಯನ್ನು ಮತ್ತೆ ತೊಟ್ಟಿದ್ದಾರೆ. ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿಯೇ ಕಾಲ ಕಳೆಯುತ್ತಿರುವ ನಟಿ, ತಮ್ಮ ಬಿಡುವಿನ ಅವಧಿಯಲ್ಲಿ ಕಿರುಚಿತ್ರವೊಂದನ್ನು ನಿರ್ದೇಶನ ಮಾಡಿದ್ದಾರೆ.

ಸುಹಾಸಿನಿ ನಿರ್ದೇಶಿಸಿರುವ ಕಿರುಚಿತ್ರದ ಟೈಟಲ್‌ ‘ಚಿನ್ನಂಜಿರು ಕಿಲಿಯೆ’. ವಿಶೇಷವೆಂದರೆ 20 ನಿಮಿಷದ ಈ ಕಿರುಚಿತ್ರವನ್ನು ಐಫೋನ್‌ನಲ್ಲಿ ಚಿತ್ರೀಕರಣ ಮಾಡಲಾಗಿದೆ. ಯಾವುದೇ ಕಲಾವಿದರು ಅಥವಾ ಟೆಕ್ನಿಷಿಯನ್‌ಗಳ ನೆರವಿಲ್ಲದೇ ನಿರ್ಮಾಣ ಮಾಡಿದ್ದಾರೆ.

ಈ ಬಗ್ಗೆ ಸ್ವತಃ ಸುಹಾಸಿನಿ ಸಾಮಾಜಿಕ ಜಾಲತಾಣಗಳ ಮೂಲಕ ಹೇಳಿಕೊಂಡಿದ್ದಾರೆ. ‘ನನ್ನ ಲಾಕ್‌ಡೌನ್‌ ಸ್ಟೋರಿಸ್‌. 20 ನಿಮಿಷಗಳ ಕಿರುಚಿತ್ರದ ಮೊದಲ ಔಟ್‌ಪುಟ್‌ ಇವತ್ತು ಆಗಿದೆ. 4–5 ದಿನಗಳಲ್ಲಿ ನೀವೂ ನೋಡಬಹುದು’ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿದ್ದಾರೆ.

ಇದರಲ್ಲಿ ಅವರ ಮನೆ ಸದಸ್ಯರು ಮಾತ್ರ ಪಾಲ್ಗೊಂಡಂತಿದೆ. ನೋ ಲೈಟ್ಸ್‌, ನೋ ಟೆಕ್ನಿಷಿಯನ್ಸ್‌. ಕೆವಿನ್‌ ದಾಸ್‌ ಸಂಕಲನ ಹಾಗೂ ಜೇಮ್ಸ್‌ ವಸಂತನ್‌ ಸಂಗೀತ ನಿರ್ದೇಶನವಿದೆ’ ಎಂದು ಕಿರುಚಿತ್ರದ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ನಿರ್ದೇಶನದಲ್ಲಿ ಮೊದಲಿನಿಂದಲೂ ಆಸಕ್ತಿ ಹೊಂದಿದ್ದ ಸುಹಾಸಿನಿ ಅವರು 1970ರಲ್ಲಿ ಕ್ಯಾಮೆರಾ ಅಸಿಸ್ಟೆಂಟ್‌ ಆಗಿ ಕೆಲಸ ಮಾಡಿದ್ದರು. ಬಳಿಕ ಟಿವಿ ಧಾರಾವಾಹಿಯೊಂದನ್ನು ನಿರ್ದೇಶಿಸಿದ್ದರು. ‘ಇಂದಿರಾ’ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಆ ಚಿತ್ರದಲ್ಲಿ ಅನು ಹಾಸನ್‌ ಹಾಗೂ ಅರವಿಂದ ಸ್ವಾಮಿ ನಟಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು