ಜನಪ್ರಿಯ ನಟಿ ತಮನ್ನಾ ಭಾಟಿಯಾ ಅವರು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್) ರಾಯಭಾರಿಯ ಹೊಣೆಯನ್ನು ಹೊತ್ತುಕೊಂಡಿದ್ದಾರೆ.
ಪಿಟಿಐ ಚಿತ್ರ
ADVERTISEMENT
ಮಂಗಳವಾರ (ಫೆ.10)ರಂದು ನಗರದ ತಾಜ್ ವೆಸ್ಟ್ಎಂಡ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮನ್ನಾ ಅವರು ಭಾಗಿಯಾಗಿ, ನಿಗಮದ 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
ಪಿಟಿಐ ಚಿತ್ರ
ಈ ಮೂಲಕ ಕೆಎಸ್‌ಡಿಎಲ್‌ನ ರಾಯಭಾರಿಯಾಗಿ ಎರಡು ವರ್ಷ ನಟಿ ಎಲ್ಲ ಉತ್ಪನ್ನಗಳ ಪ್ರಚಾರ ನಡೆಸಲಿದ್ದಾರೆ.
ಪಿಟಿಐ ಚಿತ್ರ
ಈ ಕಾರ್ಯಕ್ರಮದಲ್ಲಿ ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ, ನಿಗಮದ ಅಧ್ಯಕ್ಷ ಸಿ.ಎಸ್.ಅಪ್ಪಾಜಿ ನಾಡಗೌಡ, ನಟಿ ತಮನ್ನಾ ಸೇರಿದಂತೆ ಹಲವಾರು ಗಣ್ಯರು ಭಾಗಿಯಾಗಿದ್ದರು.
ಪಿಟಿಐ ಚಿತ್ರ
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ನಟಿ, ‘ಮೈಸೂರು ಸ್ಯಾಂಡಲ್ ಸೋಪು ಕೇವಲ ಒಂದು ಸಾಬೂನಲ್ಲ. ಇದರೊಂದಿಗೆ ಭಾವನೆಗಳು ಬಾಲ್ಯ ಮತ್ತು ಸುಮಧುರ ನೆನಪುಗಳೆಲ್ಲ ಹೆಣೆದುಕೊಂಡಿವೆ ಎಂದರು.
ಪಿಟಿಐ ಚಿತ್ರ
‘ಇದು ಪರಿಪೂರ್ಣತೆ ಮತ್ತು ಸತ್ಯಗಳ ಸಂಗಮ. ಮಾರುಕಟ್ಟೆಯಲ್ಲಿ ಇದಕ್ಕೆ ಸಾಟಿಯಾದ ಇನ್ನೊಂದು ಸೋಪು ಇಲ್ಲ. ಇದಕ್ಕೆ ನನ್ನ ಹೃದಯದಲ್ಲಿ ವಿಶೇಷ ಸ್ಥಾನವಿದೆ’ ಎಂದು ತಮನ್ನಾ ಭಾಟಿಯಾ ಹೇಳಿದರು.
ಇನ್‌ಸ್ಟಾಗ್ರಾಂ ಚಿತ್ರ
ಕೆಂಪು ಬಣ್ಣದ ಸೀರೆ ಧರಿಸಿದ್ದ ನಟಿ ತಮನ್ನಾ ಎಲ್ಲರ ಗಮನ ಸೆಳೆದಿದ್ದಾರೆ. ನಟಿಯ ಲುಕ್ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ