ಭಾನುವಾರ, ಏಪ್ರಿಲ್ 2, 2023
23 °C

ಟ್ರೇಲರ್ ಕಿಂಡಿಯಲ್ಲಿ ‘ಆದಿಪುರಾಣ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೋಹನ್ ಕಾಮಾಕ್ಷಿ ನಿರ್ದೇಶನದ ‘ಆದಿ ಪುರಾಣ’ ಚಿತ್ರದ ಟ್ರೇಲರ್ ಬಿಡುಗಡೆ ಇತ್ತೀಚೆಗೆ ನಡೆಯಿತು. ಟ್ರೇಲರ್ ಪ್ರದರ್ಶಿಸಿದ ನಂತರ ಮಾತಾಡಿದ ಮೋಹನ್, ‘ಚಿತ್ರ ಈಗ ಸೆನ್ಸಾರ್ ಅಂಗಳದಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ಸ್ಫೂರ್ತಿ ಕಾಶಿನಾಥ್. ಈಗ ಚಿತ್ರ ಪೂರ್ಣಗೊಂಡಿದೆ. ಆದರೆ ಇದನ್ನು ನೋಡಲು ಅವರೇ ಇಲ್ಲ. ಅವರ ಆಶೀರ್ವಾದ ನಮ್ಮ ಮೇಲಿದೆ ಎಂದು ನಂಬಿದ್ದೇವೆ’ ಎಂದರು.

ಆದಿತ್ಯ ಎಂಬ ಹುಡುಗನ ಹದಿಹರೆಯದ ದಿನಗಳ ತುಮುಲಗಳು, ಗೃಹಸ್ಥಾಶ್ರಮದ ಗೊಂದಲಗಳನ್ನು ಇಟ್ಟುಕೊಂಡೇ ಈ ಸಿನಿಮಾ ತಯಾರಾಗಿದೆ ಎಂಬುದಕ್ಕೆ ಟ್ರೇಲರ್‌ನಲ್ಲೇ ಸೂಚನೆ ಇದೆ. 

ನಾಯಕ ಶಶಾಂಕ್ ಈ ಚಿತ್ರದಿಂದ ಸಾಕಷ್ಟು ವಿಷಯಗಳನ್ನು ಕಲಿತಿದ್ದಾರಂತೆ. ‘ಈ ಚಿತ್ರದ ಕೆಲಸದಲ್ಲಿ ತೊಡಗಿಕೊಂಡಿರುವ ಒಂದು ವರ್ಷ ನನ್ನ ಬದುಕಿನ ಅವಿಸ್ಮರಣೀಯ ಗಳಿಗೆ’ ಎಂದರು.

‘ಪ್ರೀತಿ ಕಿತಾಬು’ ಎಂಬ ಸಿನಿಮಾಕ್ಕೆ ಮೋಹನ್ ಸಂಕಲನಕಾರರಾಗಿದ್ದರು. ಆಗಲೇ ಶಶಾಂಕ್ ಅವರನ್ನು ನೋಡಿ ಅವರ ಕಥೆಗೆ ನಾಯಕನನ್ನಾಗಿ ಆಯ್ಕೆ ಮಾಡಿದ್ದರಂತೆ. 

ಮೋಕ್ಷಾ ಕುಶಾಲ್ ಮತ್ತು ಅಹಲ್ಯಾ ಇಬ್ಬರು ಈ ಚಿತ್ರದ ನಾಯಕಿಯರು. ಅಹಲ್ಯಾ ಕಾರ್ಯಕ್ರಮದಲ್ಲಿ ಹಾಜರಿರಲಿಲ್ಲ. ಮೋಕ್ಷಾ ಕುಶಾಲ್ ‘ನಾನು ದಿಶಾ ಎನ್ನುವ ಪಾತ್ರದಲ್ಲಿ ನಟಿಸಿದ್ದೇನೆ. ಐಟಿ ತಂಡದ ಮುಖ್ಯಸ್ಥೆ. ಬೋಲ್ಡ್‌ ಆಗಿರುತ್ತಾಳೆ. ಪ್ರೀತಿಯಲ್ಲಿ ನಂಬಿಕೆ ಇರುವುದಿಲ್ಲ. ಅಂಥವಳು ಪ್ರೀತಿಗೆ ಬಿದ್ದಾಗ ಏನಾಗುತ್ತದೆ ಎನ್ನುವುದೇ ಚಿತ್ರದ ಕಥೆ’ ಎಂದರು.

ವತ್ಸಲಾ ಮೋಹನ್ ಒಂದು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ‘ಈ ಚಿತ್ರದಲ್ಲಿ ಬಹಳ ಆಪ್ತವಾಗಿ ತೊಡಗಿಸಿಕೊಂಡಿದ್ದೇನೆ. ನಾಯಕನ ತಾಯಿಯ ಪಾತ್ರ ನನ್ನದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.