ಸದಾ ಒಂದಿಲ್ಲೊಂದು ವಿಭಿನ್ನ ಮತ್ತು ಪ್ರಯೋಗಾತ್ಮಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವ ನಟಿ ಅದಿತಿ ಪ್ರಭುದೇವ ಈ ಬಾರಿ ಫ್ಯಾಂಟಸಿ ಮತ್ತು ಹಾರಾರ್ ಕಥೆಯ ‘ಆನ’ ಚಿತ್ರದಲ್ಲಿ ‘ಲೇಡಿ ಸೂಪರ್ ಹೀರೋ’ ಆಗಿ ಮಿಂಚು ಹರಿಸಲು ಸಜ್ಜಾಗಿದ್ದಾರೆ.

‘ನಾನು ತುಂಬಾ ಇಷ್ಟಪಟ್ಟು ಮತ್ತು ಕಷ್ಟಪಟ್ಟು ಮಾಡಿದ ಸಿನಿಮಾ ಇದು. ಇಂಥ ಪಾತ್ರ ಸಿಕ್ಕಿದ್ದು ನನ್ನ ಅದೃಷ್ಟವೇ ಸರಿ. ಕಥೆ ಕೇಳಿ ಒಂದೇ ಸಲಕ್ಕೆ ನಟಿಸಲು ಒಪ್ಪಿದೆ. ಚಿತ್ರದ ಬಹುಪಾಲು ಶೂಟಿಂಗ್ ರಾತ್ರಿ ಹೊತ್ತಿನಲ್ಲಿಯೇ ನಡೆದಿದೆ. ಇನ್ನು ಕೆಲ ಭಾಗದ ಚಿತ್ರೀಕರಣ ಮಾತ್ರ ಬಾಕಿ ಇದೆ. ನನ್ನ ಸಿನಿಮಾ ಬದುಕಿನಲ್ಲಿ ಈವರೆಗೂ ಮಾಡಿರದ ವಿಶೇಷ ಪಾತ್ರವಿದು’ ಎನ್ನುವ ಮಾತು ಸೇರಿಸಿದರು ಅದಿತಿ.

ಅದಿತಿ ಲಾಕ್‌ಡೌನ್ ವೇಳೆ ಪ್ರಯೋಗಾತ್ಮಕವಾಗಿ ನಟಿಸಿದ್ದ ಆಲ್ಬಂ ವಿಡಿಯೊ ಸಾಂಗ್ ‘ಪರ್ಫೆಕ್ಟ್ ಗರ್ಲ್’ ಬಿಡುಗಡೆಯಾದ ಎರಡೇ ದಿನಗಳಲ್ಲಿ ಯೂಟ್ಯೂಬ್‌ನಲ್ಲಿ 10 ಲಕ್ಷ ಮಂದಿ ವೀಕ್ಷಣೆಯ ದಾಖಲೆ ಬರೆದಿದೆ.

ಈ ಚಿತ್ರಕ್ಕೆ ಮನೋಜ್ ಪಿ. ನಡಲುಮನೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ಕಿರುಚಿತ್ರ ಮತ್ತು ಟೆಲಿ ಫಿಲಂಗಳನ್ನು ನಿರ್ದೇಶಿಸಿದ ಅನುಭವ ಅವರದು. ಇದು ಇವರ ಚೊಚ್ಚಲ ಸಿನಿಮಾ. ‘ ಕೋವಿಡ್ ಲಾಕ್‌ಡೌನ್‌ನಲ್ಲಿ ಹೊಳೆದ ಕಥೆ ಇದು. ಸದ್ಯ ಇಡೀ ಭಾರತೀಯ ಚಿತ್ರರಂಗದಲ್ಲಿ ‘ಲೇಡಿ ಸೂಪರ್ ಹೀರೊ’ ಪರಿಕಲ್ಪನೆಯಲ್ಲಿ ಯಾವುದೇ ಸಿನಿಮಾ ಬಂದಂತಿಲ್ಲ. ಈ ಅಂಶವನ್ನು ಅದನ್ನೇ ಗಮನದಲ್ಲಿಟ್ಟುಕೊಂಡೇ ಕಥೆ ಸಿದ್ಧಪಡಿಸಿದ್ದೆ. ಬಹುತೇಕ ಚಿತ್ರೀಕರಣ ಮುಗಿದಿದ್ದು, ಕ್ಲೈಮ್ಯಾಕ್ಸ್ ಶೂಟಿಂಗ್ ಬಾಕಿ ಉಳಿದಿದೆ. ಈ ಚಿತ್ರದ ಸರಣಿಗಳು ಮುಂದುವರಿಯಲಿವೆ’ ಎಂದು ಮಾತಿಗಾರಂಭಿಸಿದರು ಮನೋಜ್.

ಅದಿತಿ ಜತೆಗೆ ಸಮರ್ಥ, ವಿಕಾಸ್ ಉತ್ತಯ್ಯ, ವರುಣ್ ಅಮರಾವತಿ ಮತ್ತು ಕಾರ್ತಿಕ್ ನಾಗರಾಜ್ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಚೂರಿಕಟ್ಟೆ’ ಸಿನಿಮಾ ಖ್ಯಾತಿಯ ಪ್ರೇರಣಾ ಕೂಡ ಇದರಲ್ಲಿ ನಟಿಸಿದ್ದಾರೆ.

ಉದಯ್ ಲೀಲಾ ಛಾಯಾಗ್ರಹಣ, ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆ, ಸಂಕಲನ ವಿಜೇತ ಚಂದ್ರ ಅವರದು. ಯೂಕೆ ಪ್ರೊಡಕ್ಷನ್ಸ್ ಲಾಂಛನದಲ್ಲಿ ಪೂಜಾ ವಸಂತ್‌ಕುಮಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನವರಾತ್ರಿ ಹಬ್ಬದ ಸಂಭ್ರಮದಲ್ಲಿ ಚಿತ್ರದ ಶೀರ್ಷಿಕೆಯನ್ನು ರೇಣುಕಾಂಬ ಸ್ಟುಡಿಯೋದಲ್ಲಿ ಬಿಡುಗಡೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.