ಸೋಮವಾರ, ಮಾರ್ಚ್ 8, 2021
30 °C

ಅರಶಿನ ಶಾಸ್ತ್ರದ ಸಂಭ್ರಮದಲ್ಲಿ ಐಂದ್ರಿತಾ ದಿಗಂತ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸ್ಯಾಂಡಲ್‌ವುಡ್‌ ತಾರೆಯರಾದ ದಿಗಂತ್‌ ಮತ್ತು ಐಂದ್ರಿತಾ ಮದುವೆ ಡಿ. 12ಕ್ಕೆ ಸಂಜೆ 6 ಗಂಟೆಗೆ ನಡೆಯಲಿದೆ. ಇಂದು  (ಡಿ.11) ಸಂಜೆಯೇ ನಂದಿಬೆಟ್ಟದ ಸಮೀಪದ ಡಿಸ್ಕವರಿ ವಿಲೇಜ್‌ನಲ್ಲಿ ಸಂಭ್ರಮ ಮನೆಮಾಡಿದೆ.

ಎರಡೂ ಕುಟುಂಬದವರ ಸಮ್ಮುಖದಲ್ಲಿ ಅರಿಶಿನ ಶಾಸ್ತ್ರದ ಸಂಭ್ರಮದಲ್ಲಿ ಮದುಮಕ್ಕಳು ಮುಳುಗೆದ್ದರು. ಅರಿಶಿನ ಶಾಸ್ತ್ರದಲ್ಲಿ ಪಾಲ್ಗೊಳ್ಳುವುದಕ್ಕೂ ಮುನ್ನ ದಿಗಂತ್ ಮತ್ತು ಐಂದ್ರಿತಾ ಇಬ್ಬರೂ ಸೇರಿ ಪುಟ್ಟ ವಿಡಿಯೊ ಮಾಡಿ ‘ಇನ್ನೇನು ಕೆಲವೇ ಕ್ಷಣಗಳಲ್ಲಿ ನಾವು ಮದುವೆಯಾಗುತ್ತಿದ್ದೇವೆ. ನಿಮ್ಮ ಆಶೀರ್ವಾದ ಇರಲಿ ಎಂದೂ ಕೋರಿಕೊಂಡಿದ್ದಾರೆ.

ಅರಿಶಿನ ಶಾಸ್ತ್ರದಲ್ಲಿ ಪಾಲ್ಗೊಂಡಿರುವ ಚಿತ್ರಗಳನ್ನು ದಿಗಂತ್ ಮತ್ತು ಐಂದ್ರಿತಾ ಇಬ್ಬರೂ ಶೇರ್‌ಚಾಟ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.  ಮಂಗಳವಾರ ಅರಿಶಿನ ಶಾಸ್ತ್ರ ಮುಗಿಸಿದ ಮದುಮಕ್ಕಳು ‘ಸಂಗೀತ’ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಈ ಸಂಗೀತ ಕಾರ್ಯಕ್ರಮದಲ್ಲಿ ಐಂದ್ರಿತಾ ಮತ್ತು ದಿಗಂತ್ ನೆಚ್ಚಿನ ಗೀತೆಗಳನ್ನೇ ಪ್ರಸ್ತುತಪಡಿಸಲಾಗುತ್ತಿದೆ. ಅದಕ್ಕೆ ಈ ತಾರಾ ಜೋಡಿ ಹೆಜ್ಜೆ ಹಾಕುತ್ತಿದೆ.

ನಟ ರಕ್ಷಿತ್ ಶೆಟ್ಟಿ, ಶರ್ಮಿಳಾ ಮಾಂಡ್ರೆ, ಪ್ರೇಮಾ ಸೇರಿದಂತೆ ಕೆಲವು ತಾರೆಯರು, ಕುಟುಂಬದವರು ಮತ್ತು ಆಪ್ತರು ಮಾತ್ರ ಭಾಗಿಯಾಗಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.