ಮಂಗಳವಾರ, ಡಿಸೆಂಬರ್ 7, 2021
27 °C

ಯಾಕೋ ಕಡಲ ತೀರದ ಸಂಜೆ ನೆನಪಾಗುತ್ತಿದೆ: ಐಂದ್ರಿತಾ ರೇ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

Aidrita Ray Instagram Post

ಬೆಂಗಳೂರು: ದಿಗಂತ್ ಜತೆ ಮದುವೆಯ ಬಳಿಕ ನಟಿ ಐಂದ್ರಿತಾ ರೇ ಅವರು ಚಿತ್ರಗಳಲ್ಲಿ ನಟಿಸುವುದು ಕಡಿಮೆಯಾಗಿದೆ.

ಆದರೆ ಐಂದ್ರಿತಾ ರೇ ಮತ್ತು ದಿಗಂತ್ ಇಬ್ಬರೂ ಸಾಮಾಜಿಕ ತಾಣಗಳಲ್ಲಿ ಸದಾ ಕ್ರಿಯಾಶೀಲರಾಗಿರುತ್ತಾರೆ.

ಪ್ರವಾಸ ಹೋಗುವುದು, ಮುದ್ದಿನ ನಾಯಿಗಳ ಜತೆ ಸಮಯ ಕಳೆಯುವುದು ಮತ್ತು ಸೈಕ್ಲಿಂಗ್ ಹಾಗೂ ಸಾಹಸಮಯ ಕ್ರೀಡೆಗಳೆಂದರೆ ಇಬ್ಬರಿಗೂ ಅಚ್ಚುಮೆಚ್ಚು.

ಈ ರೀತಿ ಪ್ರವಾಸ ಹೋದಾಗ ಕಡಲ ತೀರದಲ್ಲಿ ಸಂಜೆ ಕಳೆದಿದ್ದನ್ನು ನಟಿ ಐಂದ್ರಿತಾ ರೇ ನೆನಪಿಸಿಕೊಂಡಿದ್ದಾರೆ.

ಸುಂದರ ಸೂರ್ಯಾಸ್ತದ ಹಿನ್ನೆಲೆಯಿರುವ ಫೋಟೊ ಒಂದನ್ನು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಬೀಚ್‌ನ ಸಂಜೆ ಎನ್ನುವುದು ಸುಂದರ ಅನುಭವ. ಮತ್ತೊಮ್ಮೆ ಹೋಗಬೇಕೆನ್ನಿಸುತ್ತಿದೆ.. ಎಂದು ಹೇಳಿಕೊಂಡಿದ್ದಾರೆ.

ಐಂದ್ರಿತಾ ಅಭಿಮಾನಿಗಳು ಕಾಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು