ಶನಿವಾರ, 25 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೊನ್ನಿಯಿನ್​ ಸೆಲ್ವನ್': ₹ 125 ಕೋಟಿಗೆ ಒಟಿಟಿ ಹಕ್ಕುಗಳ ಮಾರಾಟ

Last Updated 15 ಸೆಪ್ಟೆಂಬರ್ 2022, 11:08 IST
ಅಕ್ಷರ ಗಾತ್ರ

ಬೆಂಗಳೂರು: ಮಣಿರತ್ನಂ ನಿರ್ದೇಶನದ ಬಹು ನಿರೀಕ್ಷಿತ ‘ಪೊನ್ನಿಯಿನ್ ಸೆಲ್ವನ್–1’ ಸಿನಿಮಾದ ಒಟಿಟಿ ಹಕ್ಕುಗಳನ್ನು ‘ಅಮೆಜಾನ್‌ ಪ್ರೈಮ್‌‘ ಖರೀದಿ ಮಾಡಿದೆ ಎಂದು ವರದಿಯಾಗಿದೆ.

ತಮಿಳು ಮಾಧ್ಯಮಗಳು ವರದಿ ಮಾಡಿರುವಂತೆ ‘ಪೊನ್ನಿಯಿನ್ ಸೆಲ್ವನ್‘ ಚಿತ್ರದ ಒಟಿಟಿ ಹಕ್ಕುಗಳನ್ನುಅಮೆಜಾನ್‌ ಪ್ರೈಮ್‌ ₹125 ಕೋಟಿಗೆ ಖರೀದಿ ಮಾಡಿದೆ. ಈ ಬಗ್ಗೆ ಅಧಿಕೃತ ಘೋಷಣೆ ಬಾಕಿ ಇದೆ ಎಂದು ವರದಿಯಾಗಿದೆ.

‘ಪೊನ್ನಿಯಿನ್ ಸೆಲ್ವನ್’ ಚಿತ್ರದ ಮೊದಲ ಭಾಗವು ಸೆ.30ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಇದು ಎಂದು ಚಿತ್ರತಂಡ ಘೋಷಿಸಿದೆ. ಇದುತಮಿಳು, ತೆಲುಗು, ಕನ್ನಡ, ಮಲೆಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ತೆರೆಗೆ ಬರಲಿದೆ. ಈಗಾಗಲೇ ಚಿತ್ರದಟ್ರೇಲರ್‌ ಸಾಕಷ್ಟು ಸದ್ದು ಮಾಡಿದೆ.

1955ರಲ್ಲಿ ಕಲ್ಕಿ ಕೃಷ್ಣಮೂರ್ತಿಯವರು ಬರೆದ ಚೋಳ ಸಾಮ್ರಾಜ್ಯದ ರಾಜ ಅರುಲ್ಮೋಳಿ ವರ್ಮನ್ ಅವರ ಜೀವನಚರಿತ್ರೆ ಒಳಗೊಂಡಿರುವ ಕಾದಂಬರಿ ಆಧರಿಸಿ ‘ಪೊನ್ನಿಯಿನ್ ಸೆಲ್ವನ್’ ಸಿನಿಮಾ ಸಿದ್ಧವಾಗಿದೆ.

ಈ ಚಿತ್ರದಲ್ಲಿ ತಮಿಳು ಮತ್ತು ಹಿಂದಿ ಚಿತ್ರರಂಗದ ಪ್ರಮುಖ ಕಲಾವಿದರು ನಟಿಸಿದ್ದು, ಅಭಿಮಾನಿಗಳಲ್ಲಿ ಭಾರಿ ನಿರೀಕ್ಷೆ ಮೂಡಿಸಿದೆ. ಚಿತ್ರಕ್ಕೆ ಎ.ಆರ್. ರೆಹಮಾನ್ ಸಂಗೀತ ನಿರ್ದೇಶನವಿದೆ.

ಈ ಚಿತ್ರವನ್ನು ತಮಿಳಿನ ‘ಲೈಕಾ ಪ್ರೊಡಕ್ಷನ್’ ನಿರ್ಮಾಣ ಮಾಡುತ್ತಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ಗಮನ ಸೆಳೆಯುತ್ತಿವೆ.

ಚಿತ್ರದಲ್ಲಿ ಬಾಲಿವುಡ್ ನಟಿ ಐಶ್ವರ್ಯಾ ರೈ ಬಚ್ಚನ್, ತ್ರಿಷಾ, ನಟರಾದ ವಿಕ್ರಮ್‌, ಕಾರ್ತಿ, ಪ್ರಕಾಶ್ ರಾಜ್, ಜಯರಾಮ್ ಮೊದಲಾದವರ ದೊಡ್ಡ ತಾರಾಗಣವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT